ಇತರೆ

ಫೇಸ್ ಬುಕ್ ಸ್ನೇಹಿತನ ಬಲೆಗೆ ಬಿದ್ದು ವಿಚ್ಛೇದಿತ ಮಹಿಳೆಯಿಂದ ಸೈಬರ್ ವಂಚಕರಿಂದ ಕೋಟ್ಯಾಂತರ ರೂ. ವಂಚನೆ!

Views: 34

ಕನ್ನಡ ಕರಾವಳಿ ಸುದ್ದಿ: ಯಶವಂತಪುರ ಮೂಲದ ಮಹಿಳೆಯೊಬ್ಬರು ಗಂಡನಿಂದ ವಿಚ್ಛೇದನ ಪಡೆದು ದೂರುವಾಗಿದ್ದರು. ಆಕೆ ಫೇಕ್ ಫೇಸ್ ಬುಕ್ ಸ್ನೇಹಿತನ ಬಲೆಗೆ ಬಿದ್ದು 1.7 ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ. ಯುಕೆ (UK) ಉದ್ಯೋಗಿ ಎಂದು ಪರಿಚಯಿಸಿಕೊಂಡು ಸ್ನೇಹವನ್ನು ಮುಂದುವರೆಸಿದ್ದ ವಂಚಕ ಮೊಬೈಲ್ ನಂಬರ್‌ ಬದಲಾವಣೆ ಮಾಡಿಕೊಂಡು ಇಬ್ಬರು ವಾಟ್ಸಪ್ ಚಾಟ್ ಮಾಡಿಕೊಂಡಿದ್ದಾರೆ. ನಂತರ ವಾಟ್ಸಾಪ್ ಚಾಟ್ ಮೂಲಕ ಸ್ನೇಹ ಮುಂದುವರೆದ ಬಳಿಕ ವಂಚಕ UK ನಿಂದ ದುಬಾರಿ ಚಿನ್ನ, ಡೈಮಂಡ್ ಸೀರೆ, ಗೀಫ್ಟ್‌ಗಳನ್ನು ಕಳುಹಿಸುತ್ತೇನೆಂದು ಸುಳ್ಳು ಹೇಳಿ ನಂಬಿಸಿದ್ದಾನೆ. ಅಷ್ಟೇ ಅಲ್ಲದೇ ಮಹಿಳೆಯನ್ನು ನಂಬಿಸಲು ವಂಚಕ ಗಿಫ್ಟ್‌ಗಳ ಫೋಟೋಗಳನ್ನು ಶೇರ್ ಮಾಡಿ ನಕಲಿ ಕೊರಿಯ‌ರ್ ರಸೀದಿ ಕಳುಹಿಸಿದ್ದಾನೆ.

ಗಿಫ್ಟ್‌ಗಳು ದೆಹಲಿಯಲ್ಲಿ ಕಸ್ಟಮ್ಸ್‌ನಲ್ಲಿ ಇದ್ದಾವೆ ಅದನ್ನು ರಿಲೀಸ್ ಮಾಡಲು ಹಣಪಾವತಿ ಮಾಡಬೇಕು ಅದಕ್ಕೆ ನನ್ನ ಬಳಿ ಇಂಡಿಯನ್ ಕರೆನ್ಸಿ ಇಲ್ಲ ಅಂತಾ ಹೇಳಿದ್ದಾನೆ.

ನಾನು ಭಾರತಕ್ಕೆ ಬಂದ ಮೇಲೆ ಹಣ ಕೊಡುತ್ತೇನೆ ಎಂದು ಸುಳ್ಳು ಹೇಳಿದ್ದಾನೆ. ನಂತರ ವಂಚಕ ಕಸ್ಟಮ್ಸ್ ಅಧಿಕಾರಿ ಹೆಸರಿನಲ್ಲಿ ಕರೆ ಮಾಡಿ 40 ಲಕ್ಷ ಹಣವನ್ನು ಕೇಳಿದಾಗ ಮಹಿಳೆ RTGS ಮೂಲಕ ಹಣ ಪಾವತಿ ಮಾಡಿದ್ದಾಳೆ.

ಬ್ಯಾಂಕ್‌ ವರ್ಗಾವಣೆ ಮಾತ್ರವಲ್ಲದೇ ಖುದ್ದಾಗಿ ನಗದು ಸಂಗ್ರಹಿಸಿದ್ದು, ಒಟ್ಟು 1.7 ಕೋಟಿ ಹಣವನ್ನ ಇದೇ ರೀತಿಯಲ್ಲಿ ಸಂಗ್ರಹ ಮಾಡಿದ್ದಾರೆ. ಬಳಿಕ ಅನುಮಾನಗೊಂಡು ಮಹಿಳೆ ಯುಕೆ ವ್ಯಕ್ತಿಗೆ ಕರೆ ಮಾಡಿದಾಗ ವಂಚಕ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ವಂಚನೆಗೊಂಡ ಬಳಿಕ ಮಹಿಳೆ ಉತ್ತರ ವಿಭಾಗ ಸೈಬ‌ರ್ ಠಾಣೆಗೆ ದೂರು ನೀಡಿದ್ದು, ಪೊಲೀಸರು IT ಕಾಯ್ದೆ ಹಾಗೂ BNS ಸೆಕ್ಷನ್ 318 ಅಡಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.

ಸೈಬ‌ರ್ ವಂಚಕರು ವಿಚ್ಚೇದಿತ ಮಹಿಳೆಯರನ್ನ ಟಾರ್ಗೆಟ್ ಮಾಡಿ ಫೇಕ್ ಫೇಸ್ ಬುಕ್ ಪೇಜ್ ಕ್ರಿಯೇಟ್ ಮಾಡಿ ಸ್ನೇಹದ ಹೆಸರಿನಲ್ಲಿ ಹಣವನ್ನು ದೋಚುತ್ತಿದ್ದಾರೆ. ಹೀಗಾಗಿ ಫೇಸ್ ಬುಕ್‌ನ ಪ್ರೊಫೈಲ್ ನಲ್ಲಿ ಖಾಸಗಿ ಮಾಹಿತಿ ಅಪ್ಲೋಡ್ ಮಾಡುವ ಮುನ್ನ ಎಚ್ಚರಿಕೆ ಇರಲಿ.

Related Articles

Back to top button
error: Content is protected !!