ಬ್ರಹ್ಮಾವರ:ಸಹಕಾರಿ ಸಂಘದಲ್ಲಿ ಚಿನ್ನಾಭರಣ ಅಡವು ಇಟ್ಟು ಸಾಲ ಪಡೆದು ವಂಚನೆ
Views: 326
ಕನ್ನಡ ಕರಾವಳಿ ಸುದ್ದಿ: ವ್ಯಕ್ತಿಯೋರ್ವರು ಕಡಿಮೆ ಗುಣಮಟ್ಟದ ಚಿನ್ನಾಭರಣಗಳನ್ನು ಸಂಘದಲ್ಲಿ ಅಡವು ಇಟ್ಟು ಸಾಲ ಪಡೆದು ಸಂಘಕ್ಕೆ ಆರ್ಥಿಕ ನಷ್ಟ ಮತ್ತು ನಂಬಿಕೆ ದ್ರೋಹ ಮಾಡಿರುವ ಆರೋಪದ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.
ಸುರೇಖಾ ಕುಮಾರಿ ಇವರು ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ (ನಿ), ಕೊಕ್ಕರ್ಣೆ ಶಾಖೆ ಇವರ ಶಾಖಾ ವ್ಯವಸ್ಥಾಪಕರಾಗಿದ್ದು, ಆರೋಪಿ ಯಶವಂತ ಕುಮಾರ್ ಶಾಖೆಗೆ ಬಂದು ಕೆಲವು ಚಿನ್ನಾಭರಣಗಳಾದ ಬಳೆ, ಚೈನ್ 69.400 ಗ್ರಾಂ ಆಗಿದ್ದು, ಗರಿಷ್ಠ ಸಾಲ ನೀಡಲು ಕೇಳಿಕೊಂಡಿದ್ದು, ಅದರಂತೆ ಸಂಘದ ಅಪ್ರೈಸರ್ ಆದ ಕೆ. ಭಾಸ್ಕರ ಆಚಾರ್ಯ ರವರು ಚಿನ್ನಾಭರಣಗಳನ್ನು ಪರೀಕ್ಷಿಸಿ 5,20,500/- ರೂ ಸಾಲ ನೀಡಬಹುದೆಂದು ದೃಢೀಕರಣ ನೀಡಿದ್ದು, ಅದರ ಆಧಾರದ ಮೇಲೆ 4,60,000/ರೂ ಸಾಲ ನೀಡಿದ್ದು, ಕೆಲವು ದಿನಗಳ ಬಳಿಕ ಆರೋಪಿಯು ಅಡವಿರಿಸಿದ ಚಿನ್ನಾಭರಣಗಳನ್ನು ಪರೀಕ್ಷಿಸಿದಾಗ ಅಲ್ಪ ಗುಣಮಟ್ಟದೆಂದು ಅಪ್ರೈಸರ್ ತಿಳಿಸಿದ್ದು, ಆರೋಪಿಯು ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ. ಆರೋಪಿಯು ಕಡಿಮೆ ಗುಣಮಟ್ಟದ ಚಿನ್ನಾಭರಣಗಳನ್ನು ಸಂಘದಲ್ಲಿ ಅಡವು ಇಟ್ಟು ಸಾಲ ಪಡೆದು ಸಂಘಕ್ಕೆ ಆರ್ಥಿಕ ನಷ್ಟ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾರೆ.ಆರೋಪಿಯೊಂದಿಗೆ ಉಮಾನಾಥ ಶೆಟ್ಟಿ ಎಂಬಾತನು ಶಾಮೀಲು ಇರುವ ಬಗ್ಗೆ ಸಂದೇಹವಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






