ಶಿಕ್ಷಣ
ಬೈಂದೂರು: ಬಿಜೂರು ಸಾಲಿಮಕ್ಕಿ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಟೇಬಲ್ ಕೊಡುಗೆ ನೀಡಿ ಸ್ವಾತಂತ್ರೋತ್ಸವ ಆಚರಣೆ

Views: 170
ಬೈಂದೂರು: ತಾಲೂಕಿನ ಬಿಜೂರು ಗ್ರಾಮದ ಸಾಲಿಮಕ್ಕಿ ಅಂಗನವಾಡಿ ಕೇಂದ್ರದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಜರುಗಿತು.
ಪಾರ್ವತಿ ಕೆ.ಪೂಜಾರಿ ಅವರು ಪ್ರತಿ ವರ್ಷದಂತೆ ಅಂಗವಾಡಿ ಮಕ್ಕಳಿಗೆ ಸಮವಸ್ತ್ರ ಕೊಡುಗೆ ನೀಡಿ ವಿತರಿಸಿದ್ದಾರೆ. ರಾಘವೇಂದ್ರ ಹಾಡಿಕಿರಿನ ಮನೆ ಬಿಜೂರು ಇವರು ಅಂಗನವಾಡಿಗೆ ಟೇಬಲ್ ಕೊಡುಗೆಯಾಗಿ ನೀಡಿರುತ್ತಾರೆ.
ಬಾಲ ವಿಕಾಸ ಸಮಿತಿ ಅಧ್ಯಕ್ಷರು ಶ್ರೀಮತಿ ಸುಮಿತ್ರಾ ಹಾಗೂ ಸದಸ್ಯರಾದ ಹೇಮಾ ಹಾಗೂ ಜಯಲಕ್ಷ್ಮಿ ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ರಾಜೇಂದ್ರ ಹಾಗು ಮುಖ್ಯ ಅತಿಥಿಯಾಗಿ ನಾಗಪ್ಪ ಹಾಗೂ ನಂದೀಶ್ ದೇವಾಡಿಗ ಆಶಾ ಕಾರ್ಯಕರ್ತೆ ಸುಶೀಲಾ.ಎನ್ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಸುಶೀಲ ಬಿ. ಸಹಾಯಕಿ ದಾರು ಕಾರ್ಯಕ್ರಮ ನೆರವೇರಿಸಿಕೊಟ್ಟರು. ರಮೇಶ್ ದೇವಾಡಿಗ ,ಅಣ್ಣಪ್ಪ ದೇವಾಡಿಗ ,ಶೀನಾ ದೇವಾಡಿಗ , ಉಮೇಶ್ ದೇವಾಡಿಗ ಹಾಗೂ ಗ್ರಾಮ ಪಂಚಾಯತ್ ಬಿಜೂರು ಸಿಹಿ ತಿಂಡಿಯನ್ನು ಒದಗಿಸಿದರು.