ಶಿಕ್ಷಣ

ಬೃಹ್ಮಾವರ ಎಸ್ ಎಂಎಸ್ ಕಾಲೇಜು:ಮನು ಹಂದಾಡಿ ‘ನಿತ್ಯ ಜೀವನದಲ್ಲಿ ಹಾಸ್ಯ’  ಕಾರ್ಯಕ್ರಮ 

Views: 6

ಉಡುಪಿ:ಬೃಹ್ಮಾವರ ಎಸ್ ಎಂಎಸ್ ಕಾಲೇಜಿನ ಸಾಹಿತ್ಯ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಲಲಿತಾ ಕಲಾ ಸಂಘಗಳ ವತಿಯಿಂದ ‘ನಿತ್ಯ ಜೀವನದಲ್ಲಿ ಹಾಸ್ಯ’ ಎಂಬ ವಿಷಯದ ಕುರಿತು ಇತ್ತೀಚೆಗೆ ಕಾರ್ಯಕ್ರಮ ನಡೆಯಿತು‌

‘ ಮನು ಹಂದಾಡಿ’ ದೇಶ ವಿದೇಶಗಳಲ್ಲಿ ಜನ ಜನಪ್ರಿಯರಾದ  ಶ್ರೀ ಮನೋಹರ್ ಹೆಗ್ಡೆ ಹಂದಾಡಿ, ಬ್ರಹ್ಮಾವರ, ಉಡುಪಿ ಜಿಲ್ಲೆ ಇವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದು, ಹಲವಾರು ಜೀವನ ಮೌಲ್ಯಾಧಾರಿತ ವಿಷಯಗಳನ್ನು ಹಾಸ್ಯ ಚಟಾಕಿಗಳ ಮೂಲಕ ಹಂಚಿಕೊಂಡರು . ಮನು ಹಂದಾಡಿ ಯವರು ತಮ್ಮ ಹಾಸ್ಯ ಭರಿತ ಕುಂದಾಪುರ ಕನ್ನಡ ಶೈಲಿಯ ವಾಕ್ಚಾತುರ್ಯದ ಮೂಲಕ ನೆರೆದಿರುವ ಎಲ್ಲರನ್ನು ನಗೆ ಕಡಲಲ್ಲಿ ತೇಲಿಸಿದರು. ಇತ್ತೀಚೆಗಿನ ದಿನಗಳಲ್ಲಿ ಸೋಯಲ್ ಮೀಡಿಯಾದಿಂದ ಭಾಷೆಯ ಮೇಲೆ ಗಂಭೀರ ಪರಿಣಾಮ ಆಗುತ್ತಿದೆ. ಭಾಷೆಯೊಂದಿಗೆ ಸಂಸ್ಕೃತಿ, ಸಂಸ್ಕಾರಗಳೂ ಅಳಿಯುತ್ತಿವೆ. ಆಧುನಿಕ ಯುಗದಲ್ಲಿ ಭಾಷೆಯನ್ನು ಎಲ್ಲಿ, ಹೇಗೆ ಬಳಸಬೇಕು ಎನ್ನುವ ಪರಿಜ್ಞಾನ ಇಲ್ಲದಿರುವುದೇ ಭಾಷೆಯ ಅಳಿನ ಮೂಲ ಕಾರಣವಾಗಿದೆ ಎಂದರು. ಪ್ರತಿಯೊಬ್ಬರ ಜೀವನದಲ್ಲಿ ಹಾಸ್ಯ ಬೇಕು,ಆದರೆ ಜೀವನ ಹಾಸ್ಯಾಸ್ಪದ ವಾಗಬಾರದು ಎಂದು ಮನವರಿಕೆ ಮಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಕೆ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ಹಾಸ್ಯ ಪ್ರತಿಯೊಬ್ಬರಿಗೂ ಮುದ,ಸಾಂತ್ವನ ಮತ್ತು ಸಮಾಧಾನಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಮನು ಹಂದಾಡಿ ಯವರು ಪ್ರಶಂಸಾರ್ಹರು ಮತ್ತು ಈ ಒಂದು ಸಮಾಜಮುಖಿ ಕಾರ್ಯ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.

 

ಕಾರ್ತಿಕ್ ತೃತೀಯ ಬಿಕಾಂ ಪ್ರಾರ್ಥಿಸಿದರು, ಶ್ರೀನಿಧಿ ತೃತೀಯ ಬಿಕಾಂ ಸ್ವಾಗತಿಸಿದರು. ಫಾತಿಮಾ ದ್ವಿತೀಯ ಬಿ ಎ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.ಐಶ್ವರ್ಯ ಲಕ್ಷ್ಮಿ ದ್ವಿತೀಯ ಬಿಎ ಧನ್ಯವಾದ ಸಮರ್ಪಿಸಿದರು .

ಪ್ರತೀಕ್ ತೃತೀಯ ಬಿ ಸಿ ಎ ಮತ್ತು ಅರ್ಚನ ತೃತೀಯ ಬಿಕಾಂ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾಲೇಜಿನ ಉಪನ್ಯಾಸಕ- ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು . ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

 

Related Articles

Back to top button