ಇತರೆ

ಬಿಸಿ ಸಾಂಬಾರು ಬಿದ್ದು ಗಾಯಗೊಂಡಿದ್ದ ಅಡುಗೆ ಸಹಾಯಕಿ ಸಾವು

Views: 0

ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ವೇಳೆ ಬಿಸಿ ಸಾಂಬಾರು ಮೈಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಅಡುಗೆ ಸಹಾಯಕಿ ಚಿಕಿತ್ಸೆಗೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮುಂಡುಗೋಡಿನಲ್ಲಿ  ಅಗಸ್ಟ್ 19ರಂದು ಅನ್ನಪೂರ್ಣ ಮಧ್ಯಾಹ್ನ ಬಿಸಿ ಊಟ ತಯಾರಿ ಮಾಡುತ್ತಿದ್ದಾಗ ಬಿಸಿ ಸಾಂಬಾರು ಪಾತ್ರೆಯನ್ನು ಎತ್ತಿಕೊಂಡು ಬರುವ ಸಮಯದಲ್ಲಿ ಅನ್ನಪೂರ್ಣ ಕಾಲು ಜಾರಿ ಬಿದ್ದಿದ್ದರು. ಈ ವೇಳೆ ಸಾಂಬಾರು ಮೈಮೇಲೆ ಬಿದ್ದು ದೇಹವು ಅರ್ಧದಷ್ಟು ಭಾಗ ಸುಟ್ಟು ಗಂಭೀರ ಗಾಯಗೊಂಡಿದ್ದರು.

ಶುಕ್ರವಾರ ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Related Articles

Back to top button
error: Content is protected !!