ಸಾಂಸ್ಕೃತಿಕ

‘ಬಿಗ್ ಬಾಸ್’ ಮನೆಯಲ್ಲಿ ‘ಫೇಕ್’ ಸ್ಪರ್ಧಿ ಚೈತ್ರಾ ಕುಂದಾಪುರ!

Views: 163

ಕನ್ನಡ ಕರಾವಳಿ ಸುದ್ದಿ: ಬಿಗ್ ಬಾಸ್’ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಕೆಲವರು ಊಸರವಳ್ಳಿ ಬುದ್ಧಿ ತೋರಿಸಿದರೆ, ಇನ್ನು ಕೆಲವರು ಫೇಕ್ ಎನಿಸುತ್ತಿಕೊಳ್ಳುತ್ತಿದ್ದಾರೆ. ಅಂತಹ ಸ್ಪರ್ಧಿಗಳು ಯಾರು ಎಂಬುದನ್ನು ಬಿಗ್ ಬಾಸ್ ಮನೆಯ ಸದಸ್ಯರಿಂದಲೇ ನಟ ‘ಕಿಚ್ಚ’ ಸುದೀಪ್ ಹೇಳಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯು ಇಂದಿನ (ನ.10) ‘ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ’ ಸಂಚಿಕೆಯ ಪ್ರೋಮೋ ರಿಲೀಸ್ ಮಾಡಿದ್ದು, ಅದರಲ್ಲಿ ಸುದೀಪ್ ಅವರು ಮನೆಯ ಸ್ಪರ್ಧಿಗಳಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ.

“ಮನೆ ಮೆಚ್ಚಿದ ಫೇಕ್ ಸ್ಪರ್ಧಿ ಯಾರು” ಎಂಬ ಪ್ರಶ್ನೆಗೆ ಧರ್ಮ ಕೀರ್ತಿರಾಜ್‌, ಭವ್ಯಾ ಗೌಡ ಸೇರಿದಂತೆ ಬಹುತೇಕರು ಚೈತ್ರಾ ಕುಂದಾಪುರ ಅವರ ಹೆಸರನ್ನು ಹೇಳಿದ್ದಾರೆ. ಇದಕ್ಕೆ ಮೋಕ್ಷಿತಾ ನೀಡಿದ ಕಾರಣ ಹೀಗಿದೆ. “ಚೈತ್ರಾ ಕುಂದಾಪುರ ಅವರು ಇಲ್ಲಿರುವುದಕ್ಕೂ ನಮ್ಮ ಜತೆ ಮಾತನಾಡುವುದಕ್ಕೂ ತುಂಬ ವ್ಯತ್ಯಾಸ ಇದೆ” ಎಂದು ಅವರು ಹೇಳಿದ್ದಾರೆ. ಹಾಗೆಯೇ, “ಊಸರವಳ್ಳಿ ಸ್ಪರ್ಧಿ ಯಾರು ಎಂಬ ಪ್ರಶ್ನೆಗೆ ತ್ರಿವಿಕ್ರಮ್, ಹನುಮಂತ ಲಮಾಣಿ ಸೇರಿದಂತೆ ಬಹುತೇಕರು ಗೋಲ್ಡ್ ಸುರೇಶ್ ಹೆಸರನ್ನು ಸೂಚಿಸಿದ್ದಾರೆ. “ಐದೈದು ನಿಮಿಷಕ್ಕೊಮ್ಮೆ ಚೇಂಜ್ ಆಗ್ತಾನೆ. ಮೊದಲು ಒಂಥರಾ ಹೇಳ್ತಾನೆ. ಆಮೇಲೆ ನಾನ್ಯಾವಾಗ ಆ ಥರ ಹೇಳಿದೆ ಅಂತ ಹೇಳಿಬಿಡ್ತಾನ್ರೀ. ಹೌದು, ನಾನು ಸುಧಾರಿಸಿಕೊಳ್ತೀನಿ ಅಂತ ಹೇಳ್ತಾನ್ರೀ. ಆದರೆ ಮತ್ತೆ ಅದೇ ಕಥೆ ಅದೇ ಹಣೆಬರಹ ರೀ ಇವನದ್ದು” ಎಂದು ಹನುಮಂತ ಹೇಳಿದ್ದಾರೆ. ಇದರ ಪೂರ್ತಿ ಮಾಹಿತಿ ಇಂದಿನ ಸಂಚಿಕೆಯಲ್ಲಿ ಸಿಗಲಿದೆ.

Related Articles

Back to top button
error: Content is protected !!