ಸಾಂಸ್ಕೃತಿಕ

ಬಾಲಿವುಡ್ ಖ್ಯಾತ ನಟಿ ಮಲೈಕಾ ಆರೋರಾ ತಂದೆ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

Views: 113

ಮುಂಬೈ ಬಾಲಿವುಡ್ ಖ್ಯಾತ ನಟಿ ಮಲೈಕಾ ಆರೋರಾ ತಂದೆ ಮುಂಬೈ ಬಾದ್ರಾದಲ್ಲಿರುವ ಬೃಹತ್ ಕಟ್ಟಡದ 7ನೇ ಮಹಡಿಯಿಂದ ಜಿಗಿದು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ನಟಿ ಮಲೈಕಾ ಅರೋರಾ ಪತಿ ಅರ್ಬಾಜ್ ಖಾನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ನಟಿ ನಿವಾಸಕ್ಕೆ ಬೇಟಿ ನೀಡಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಟಿ ಮಲೈಕಾ ಅರೋರಾ ಅವರು ಮಹಾರಾಷ್ಟ್ರ ರಾಜ್ಯದ ಥಾಣೆಯಲ್ಲಿ ಜನಿಸಿದ್ದಾರೆ. ನಟಿ 11 ವರ್ಷದಲ್ಲಿದ್ದಾಗಲೇ ಅವರ ಪೋಷಕರು ವಿಚ್ಛೇದನ ಪಡೆದು ದೂರವಾಗಿದ್ದು. ಬಾಲ್ಯದಲ್ಲಿ ಇಂತಹ ಕಹಿ ಘಟನೆಗಳನ್ನು ಎದುರಿಸಿದ್ದ ನಟಿ ಪೋಷಕರ ವಿಚ್ಛೇದನ ನಂತರ ತಾಯಿ ಮತ್ತು ಸಹೋದರಿ ಅಮೃತಾ ಅರೋರಾ ಜೊತೆ ಚೆಂಬೂರ್‌ನಲ್ಲಿ ವಾಸಿಸಿದರು.

ಮಲೈಕಾ ತಾಯಿ ಜಾಯ್ಸ್ ಪಾಲಿಕಾರ್ಪ್ ಮೂಲತಃ ಮಲಯಾಳಿ ಕ್ರಿಶ್ಚಿಯನ್ ಆಗಿದ್ದು ಅವರ ತಂದೆ ಅನಿಲ್ ಅರೋರಾ, ಪಂಜಾಬ್‌ದವರಾಗಿದ್ದು, ಅವರು ಭಾರತೀಯ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸಿದ್ದರು.

ತಂದೆ ವಿಚ್ಛೇದನ ಕೊಟ್ಟ ದೂರವಾದಾಗ ನನ್ನ ತಾಯಿಯನ್ನು ಹೊಸ ಬದುಕು ಕಟ್ಟಿಕೊಂಡ ರೀತಿ, ಅವರ ಧೈರ್ಯ ಏನೆಂಬುದು ನನಗೆ ತಿಳಿಯಿತು ಎಂದು ನಟಿ ಮಲೈಕಾ ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಸದ್ಯ ಅವರ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬುದು ಗೊತ್ತಾಗಬೇಕಿದೆ. ಸದ್ಯ ಪ್ರಕರಣ ತನಿಖೆ ಹಂತದಲ್ಲಿದೆ.

Related Articles

Back to top button
error: Content is protected !!