ಇತರೆ
ಬಾರ್ಕೂರು: ಯಡ್ತಾಡಿಯಲ್ಲಿ ಕಲ್ಲು ಕ್ವಾರಿ ಹೊಂಡದಲ್ಲಿ ಮುಳುಗಿ ಯುವಕ ಸಾವು
Views: 55
ಕನ್ನಡ ಕರಾವಳಿ ಸುದ್ದಿ: ಬಾರ್ಕೂರು ಸಮೀಪ ಯಡ್ತಾಡಿಯ ಕಲ್ಲು ಕ್ವಾರಿ ಹೊಂಡದ ನೀರಿನಲ್ಲಿ ಮುಳುಗಿ ಯುವಕ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಮನೋಹರ ನಾಯ್ಕ (30) ಮೃತಪಟ್ಟವರು. ಸ್ನೇಹಿತನೊಂದಿಗೆ ಕಲ್ಲು ಕ್ವಾರಿ ಬಳಿ ತೆರಳಿದ್ದರು. ಆ ಪೈಕಿ ನೀರಿಗೆ ಇಳಿದ ಮನೋಹರ ಮೃತಪಟ್ಟಿದ್ದಾರೆ. ಅವರು ಫಿಡ್ಸ್ ಕಾಯಿಲೆಯಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ. ಮೃತರು ಕೂಲಿ ಕೆಲಸಕ್ಕೆ ತೆರಳುತ್ತಿದ್ದು ತಂದೆ, ತಾಯಿ ಸಹೋದರನನ್ನು ಅಗಲಿದ್ದಾರೆ.






