ಬಾರಕೂರು : ಶಂಕರ ಜಯಂತಿ ಆಚರಣೆ

Views: 0
ಬೃಹ್ಮಾವರ: ಬಾರಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಶಂಕರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಭಜನೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಸಂಚಾಲಕಿಯಾದ ಶ್ರೀಮತಿ ಹೇಮಲತಾ ಚಂದ್ರಶೇಖರ್ ಕೆಳಾರ್ಕಳಬೆಟ್ಟು ಅವರು ಮಾತನಾಡಿ ಮಧ್ಯಯುಗದಲ್ಲಿ ಶಂಕರಾಚಾರ್ಯರು ದೇಶದ ಉದ್ದಗಲಕ್ಕೂ ಸಂಚಾರ ಮಾಡಿ ಹಲವಾರು ಮಠ ಗಳನ್ನು ಸ್ಥಾಪಿಸಿ ಹಿಂದೂ ಧರ್ಮ ಗ್ರಂಥಗಳ ಮೇಲೆ ವಿಶ್ಲೇಷಣೆಯನ್ನು ಬರೆದು, ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸುವ ಮೂಲಕ ಹಿಂದೂ ಧರ್ಮವನ್ನ ಪುನರುಜ್ಜೀವನ ಗೊಳಿಸಿದರು ಎಂದು ನುಡಿದರು. 
ಅನಂತರ ಎಲ್ಲರೂ ಸೇರಿ ಶ್ರೀ ಶಂಕರಾಚಾರ್ಯರ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರರಾದ ಡಾ. ಜಯರಾಮ್ ಶೆಟ್ಟಿಗಾರ್, ವೀರೇಶ್ವರ ಸೇವಾ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ವಿಠ್ಠಲ್ ಶೆಟ್ಟಿಗಾರ್ ಕೆಳಾರ್ಕಳ ಬೆಟ್ಟು, ಕಾರ್ಯದರ್ಶಿಯವರಾದ ಶ್ರೀ ಭಾಸ್ಕರ್ ಶೆಟ್ಟಿಗಾರ್ ಸಾಸ್ತಾನ, ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಆಶಲತಾ ವಿಠ್ಠಲ್ ಶೆಟ್ಟಿಗಾರ್ ಮತ್ತು ಸಹ ಮೊಕ್ತೇಸರಾದ ಶ್ರೀಮತಿ ಚಂದ್ರಾವತಿ ಸದಾಶಿವ ಮೊದಲಾದವರು ಉಪಸ್ಥಿತರಿದ್ದರು.






