ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರ ಉದ್ಘಾಟನೆ
"ಇಂದಿನ ವಿದ್ಯಾರ್ಥಿ ನಾಯಕ, ನಾಳೆಯ ಸಮಾಜದ ಬೆಳಕೆಂಬ ದೀಪ" ಇದು ವಿದ್ಯಾರ್ಥಿಗಳಿಗೆ ಕೇವಲ ಶಾಲಾ ಹಂತದ ಅನುಭವವಲ್ಲ. ಬದಲಾಗಿ ಸಮಾಜದಲ್ಲಿಯೂ ಬೆಳಗುವಂತೆ ಮಾಡುವ ಬೆಳಕಿನ ದಾರಿ

Views: 58
ಕನ್ನಡ ಕರಾವಳಿ ಸುದ್ದಿ: ಪಥಸಂಚಲನದ ಮೂಲಕ ಅತಿಥಿಗಳನ್ನು ಬರಮಾಡಿಕೊಂಡು ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಅಭ್ಯರ್ಥಿಗಳಿಗೆ,ಅವರ ಸ್ಥಾನ ಪಲಕವನ್ನು ನೀಡಿ ಗೌರವಿಸಲಾಯಿತು ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರ ನೇತತ್ವದಲ್ಲಿ ಅಭ್ಯರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು.ಹಾಗೂ ಅಭ್ಯರ್ಥಿಗಳು ಅವರ ಮುಂದಿನ ಗುರಿಯನ್ನು ಸಭೆಯಲ್ಲಿ ಹಂಚಿಕೊಂಡರು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಭಾರ ಮುಖ್ಯ ಶಿಕ್ಷಕರು ನಿವೇದಿತ ಪ್ರೌಢಶಾಲೆ ಬಸ್ರೂರು ಶ್ರೀ ಪ್ರದೀಪ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಕುರಿತು “ಎಲ್ಲದಕ್ಕೂ ಮುಖ್ಯ ಜ್ಞಾನ. ಜ್ಞಾನ ಶಿಕ್ಷಣದ ಮೇಲೆ ನಿಂತಿದೆ”.ಬಾಲ್ಯದಿಂದಲೇ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಮನುಷ್ಯನಿಗೆ ಪಂಚೇಂದ್ರಿಯ ಎಷ್ಟು ಮುಖ್ಯವೋ ಶಿಸ್ತು ಕೂಡ ಅಷ್ಟೇ ಮುಖ್ಯ.ಪ್ರತಿಯೊಂದು ಮಕ್ಕಳು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಹಾಗೆ ನಾಯಕನಾದವನಿಗೆ ಅಸಾಧ್ಯವೆಂಬುದು ಯಾವುದೂ ಇಲ್ಲ.ಎಂದು ಉದಾಹರಣೆಯ ಮೂಲಕ ಸವಿಸ್ತಾರವಾಗಿ ತಿಳಿಸಿ,ಮುಂಬರುವ ದಿನಗಳಲ್ಲಿ ಶಾಲೆಯ ಹೆಸರು ಉತ್ತುಂಗಕ್ಕೆ ಏರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಾಯಕನಾದವನಿಗೆ ಕಷ್ಟವೆನ್ನುವುದು ಇದ್ದೇ ಇರುತ್ತದೆ. ಆದರೆ ಅಸಾಧ್ಯವೆನ್ನುವ ಮಾತು ಇರಬಾರದು .ಎಷ್ಟೇ ಕಷ್ಟವಿದ್ದರೂ ಅಸಾಧ್ಯವೆನ್ನುವ ಪದವಿಲ್ಲದಿದ್ದರೆ ಯಶಸ್ಸು ಗಳಿಸಲು ಸಾಧ್ಯ. ಹಾಗೆ ವಿದ್ಯಾರ್ಥಿಗಳು ಎಳವೇಯಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ನಿದರ್ಶನದ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಅಧಿಕಾರಿಯದ ಶ್ರೀಮತಿ ಆಶಾ ಶೆಟ್ಟಿ ಹಾಗೂ ಶಿಕ್ಷಕರು/ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.ಪ್ರಾಂಶುಪಾಲರಾದ ರೇಷ್ಮಾ ಅಡಪ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ವನಿತ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ದಿವ್ಯ ವಂದಿಸಿದರು.