ಸಾಂಸ್ಕೃತಿಕ

ಪ್ರತಿ ವರ್ಷದಂತೆ ಈ ಭಾರಿ “ಅವತಾರ್-2” ವೇಷಾಧಾರಿಯಾಗಿ ರವಿ ಕಟಪಾಡಿ‌

Views: 133

ಉಡುಪಿ: ಪ್ರತಿ ವರ್ಷವೂ ವಿಭಿನ್ನ ಎನ್ನುವಂತೆ ಈ ಭಾರಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಳೆದ 9 ವರ್ಷಗಳಿಂದ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದ ರವಿ ಕಟಪಾಡಿ ಈ ಬಾರಿ ವಿಶೇಷ ರೀತಿಯಲ್ಲಿ ಅವತಾರ್‌ -2 ವೇಷಾಧಾರಿಯಾಗಿ ಕಾಣಿಸಿಕೊಂಡಿದ್ದಾರೆ.ತಮ್ಮ ಸಮಾಜ ಮುಖಿ ಕೆಲಸಗಳಿಂದ ಜನರ ಮೆಚ್ಚುಗೆ ಗಳಿಸಿದ  ಬಡ ಅಶಕ್ತ ಮಕ್ಕಳ ಪಾಲಿಗೆ ನೆರವಾಗಲಿದ್ದಾರೆ.

ಹಕ್ಕಿಯ ಮೇಲೆ ಬಾನೆತ್ತರದಲ್ಲಿ ಹಾರಿಕೊಂಡು ಬರುವ ಅವತಾರ್‌ 2 ವೇಷಧಾರಿ ರವಿ ಕಟಪಾಡಿ ಅವರು ಕಟಪಾಡಿ, ಶಂಕರಪುರ, ಉದ್ಯಾವರ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮನೋರಂಜನೆ ನೀಡಲಿದ್ದಾರೆ. ಮಂಗಳವಾರ(ಆ.26) ಉಡುಪಿಯಾದ್ಯಂತ ಸಂಚರಿಸಿ ಹಣ ಸಂಗ್ರಹಿಸಲಿದ್ದಾರೆ.

ಈ ಬಾರಿ ಮೂರು ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ನೀಡಲಿದ್ದು ಇದುವರೆಗೆ 9 ವರ್ಷದಲ್ಲಿ 130 ಮಕ್ಕಳಿಗೆ 1 ಕೋಟಿ 28ಲಕ್ಷ ರೂ. ವೈದ್ಯಕೀಯ ವೆಚ್ಚ ಸಹಾಯ ಹಸ್ತ ನೀಡಿ ವೆಚ್ಚ ಭರಿಸಿದ್ದರು. ಮಟ್ಟು ದಿನೇಶ್‌ ಇವರ ಅವತಾರಕ್ಕೆ ಬಣ್ಣ ಬಳಿದಿದ್ದು ಮನಮೋಹಕ ವೇಷ ಜನ ಮನ ಸೆಳೆಯುತ್ತಿದೆ.

Related Articles

Back to top button
error: Content is protected !!