ರಾಜಕೀಯ

ಪ್ರತಿಪಕ್ಷ ನಾಯಕ ವಿಳಂಬ: ಬಿಜೆಪಿಯಲ್ಲಿ ಮೂಡದ ಒಮ್ಮತ

Views: 0

ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ಘೋಷಣೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕಗ್ಗಂಟು ಬಗೆ ಹರಿಯದಿರುವುದರಿಂದ ಅಧ್ಯಕ್ಷರ ಘೋಷಣೆಯು ವಿಳಂಬವಾಗುತ್ತಿದೆ.

ರಾಜ್ಯಾಧ್ಯಕ್ಷರ ಘೋಷಣೆ ಮಾಡುವ ಮೊದಲು ಶಾಸಕಾಂಗ ಪಕ್ಷದ ನಾಯಕ ಯಾರು ಎಂಬುದು ಅಂತಿಮಗೊಳ್ಳಬೇಕು.ಆದರೆ, ನಾಯಕರ ಅಭಿಪ್ರಾಯ ವಿಭಿನ್ನವಾಗಿರುವುದರಿಂದ ಗೊಂದಲ ಇನ್ನೂ ಬಗೆಹರಿಯುತ್ತಿಲ್ಲ. ಹೀಗಾಗಿ ಅಗಸ್ಟ್ 2 ರಂದು ನಿರ್ಧಾರವಾಗಬೇಕಿದ್ದ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದೂಡಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷರನ್ನು ಸಿಟಿ ರವಿ ಅವರನ್ನು ನೇಮಿಸುವುದಕ್ಕೆ ವರಿಷ್ಠರು ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಪ್ರತಿಪಕ್ಷ ನಾಯಕನ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಇಲ್ಲ.

ಬಸವರಾಜ್ ಬೊಮ್ಮಾಯಿ ಹೆಸರು ಅಂತಿಮ ಎಂದು ಹೇಳಲಾಗುತ್ತಿದೆಯಾದರೂ ಕೆಲವರು ತಮ್ಮ ಆಕ್ಷೇಪವನ್ನು ಇನ್ನೂ ಮುಂದುವರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಟಿ ರವಿ, ಅಶ್ವಥ್ ನಾರಾಯಣ, ಶೋಭಾ ಕರಂದ್ಲಾಜೆ ಹೆಸರು ಕೇಳಿ ಬರುತ್ತಿತ್ತು, ಆದರೆ, ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಲ್ಲಿ ಮುಂದುವರಿಯಲು ಪ್ರಧಾನಮಂತ್ರಿ ಮೋದಿ ಆಸಕ್ತಿ ಹೊಂದಿದ್ದರಿಂದ ಉಳಿದಿಬ್ಬರ ಹೆಸರು ಮುನ್ನೆಲೆಗೆ ಬಂದಿದೆ.

Related Articles

Back to top button
error: Content is protected !!