ಪ್ರಜ್ವಲ್ ವಿರುದ್ಧ ‘ಬ್ಲೂ ಕಾರ್ನರ್ ನೊಟೀಸ್’ ಜಾರಿ, ‘ನೀಲಿ ನೋಟಿಸ್’ ಕಾರ್ಯವೇನು?

Views: 83
ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್ ಕೇಸ್ ಹೊರ ಬರುತ್ತಿದ್ದಂತೆ ಏಪ್ರಿಲ್ 28ರ ರಾತ್ರಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಗೆ ಓಡಿ ಹೋದರು. ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ಪ್ರಜ್ವಲ್ ವಿರುದ್ಧ ‘ಬ್ಲೂ ಕಾರ್ನರ್ ನೋಟಿಸ್’ ಜಾರಿ ಮಾಡಿದ್ದಾರೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡುವ ಮೂಲಕ ದೇಶ ಬಿಟ್ಟಿರುವ ಪ್ರಜ್ವಲ್ ರೇವಣ್ಣಗೆ ಬಲೆ ಬೀಸಿದೆ. ಹಾಗಾದ್ರೆ ಈ ‘ಬ್ಲೂ ಕಾರ್ನರ್ ನೋಟಿಸ್’ ಎಂದರೇನು,
ನೀಲಿ ಕಾರ್ನರ್ ನೋಟಿಸ್‌ನ ಸೂಚನೆಯು ಇಂಟರ್‌ಪೋಲ್‌ನ ಕೋಡೆಡ್ ನೋಟೀಸ್‌ಗಳ ಒಂದು ಭಾಗವಾಗಿದೆ. ಈ ನೋಟಿಸ್ ಜಾರಿಯಾದರೆ, ಜಗತ್ತಿನಾದ್ಯಂತ ಮಾಹಿತಿ, ಎಚ್ಚರಿಕೆಗಳು ಮತ್ತು ಮನವಿಗಳನ್ನು ಬೇರೆ ಬೇರೆ ದೇಶಗಳ ಅಧಿಕಾರಿಗಳಿಗೆ ರವಾನಿಸಿದಂತಾಗುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು, ಅತೀ ಮುಖ್ಯ ನಿರ್ಣಾಯಕ ಅಪರಾಧಗಳ ಕುರಿತು ಮಾಹಿತಿ ಹಂಚಿಕೆಗೆ ಈ ನೋಟಿಸ್ ಸಹಕಾರಿಯಾಗಲಿದೆ. ವ್ಯಕ್ತಿಯ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಕುರಿತು ಹೆಚ್ಚುವರಿ ಮಾಹಿತಿ ಸಂಗ್ರಹಿಸಲು ‘ನೀಲಿ ನೋಟಿಸ್’ ಸಹಾಯ ಮಾಡುತ್ತದೆ.
ಜನರಲ್ ಸೆಕ್ರೆಟರಿಯೇಟ್‌ನಿಂದ ಈ ನೋಟಿಸ್‌ಗಳನ್ನು ಜಾರಿಗೆ ಮಾಡಲಾಗುತ್ತದೆ. ಈ ನೋಟಿಸ್‌ಗಳು ಜಾರಿಯಾದರೆ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಮಾಹಿತಿ ಮತ್ತು ಎಚ್ಚರಿಕೆ ಸಂದೇಶ ತಲುಪುತ್ತದೆ.
ಸಾಮಾನ್ಯವಾಗಿ ಇಂಟರ್‌ನ್ಯಾಶನಲ್ ಕ್ರಿಮಿನಲ್ ಪೋಲೀಸ್ ಸಂಸ್ಥೆಯು ವಿಶ್ವಾದ್ಯಂತ ಪೊಲೀಸ್ ಸಹಕಾರ ಮತ್ತು ಅಪರಾಧ ನಿಯಂತ್ರಣವನ್ನು ಸುಗಮಗೊಳಿಸುತ್ತದೆ.






