ಶಿಕ್ಷಣ

ಪೊಲೀಸ್ ಇಲಾಖೆಯಿಂದ ಮದರ್ ತೆರೇಸಾ ಸಂಸ್ಥೆಯ ಮಕ್ಕಳಿಗೆ “ತೆರೆದಮನೆ” ಕಾರ್ಯಕ್ರಮ

Views: 904

ಶಂಕರನಾರಾಯಣ : ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ (ರಿ) ಮಂಗಳೂರು ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ ಇಲ್ಲಿನ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳು ‘ತೆರೆದಮನೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾನೂನಿನ ಬಗ್ಗೆ ಹಲವು ಮಾಹಿತಿ ಪಡೆದುಕೊಂಡರು

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೈನ್ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.

ಉಪ ನಿರೀಕ್ಷಕರಾದ ಶಂಭುಲಿಂಗಯ್ಯ ಮಾತನಾಡಿ, ಶಾಲಾ ಮಕ್ಕಳಲ್ಲಿ ಆತಂಕ ದೂರ ಮಾಡುವ ಉದ್ದೇಶ ಪೊಲೀಸ್ ಠಾಣೆಯ ದಿನಚರಿ, ಕೈದಿ ಬರಹ ಪುಸ್ತಕ, ಅಪರಾಧಿ ನೋಂದಣಿ ಪುಸ್ತಕ,ಮಕ್ಕಳ ಸುರಕ್ಷತೆ, ರಸ್ತೆ ಸಂಚಾರ ನಿಯಮ, ಪೊಕ್ಸೋ, ಪೊಲೀಸ್ ಆಯುಧಗಳ ಮಾಹಿತಿ, ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಕಾನೂನುಗಳ ಬಗ್ಗೆ ತಿಳಿವಳಿಕೆ ನೀಡಿದರು. ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ವರ್ಗ, ಶಿಕ್ಷಕರು,ವಿದ್ಯಾರ್ಥಿಗಳು ಹಾಜರಿದ್ದರು.

 

Related Articles

Back to top button