ಪರೀಕ್ಷೆ ನಡುವೆಯೇ ವಾಶ್ ರೂಂಗೆ ಹೋಗುವುದಾಗಿ ಹೇಳಿದ್ದ ವಿದ್ಯಾರ್ಥಿನಿ ಕಾಲೇಜು ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ

Views: 0
ಶಿವಮೊಗ್ಗ: ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆದಿಚುಂಚನಗಿರಿ ಕಾಲೇಜಿನಲ್ಲಿ ನಡೆದಿದೆ. ಮೇಘಾಶ್ರೀ (17) ಮೃತ ವಿದ್ಯಾರ್ಥಿನಿ.
ಮೃತ ಮೇಘಾಶ್ರೀ ಶಿವಮೊಗ್ಗದ ಶರಾವತಿ ನಗರದಲ್ಲಿರುವ ಆದಿ ಚುಂಚನಗಿರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಮೇಘಶ್ರೀ ದಾವಣಗೆರೆಯ ಚೆನ್ನಗಿರಿ ತಾಲೂಕಿನ ಚೆನ್ನಾಪುರ ಮೂಲದ ನಿವಾಸಿ. ಕಾಲೇಜು ಹಾಸ್ಟೆಲ್ನಿಂದ ಬಯಾಲಜಿ ಎಕ್ಸಾಂಗೆಂದು ಪರೀಕ್ಷೆ ಕೊಠಡಿಗೆ ಹೋಗಿದ್ದಳು. ಬಳಿಕ ಪರೀಕ್ಷೆ ನಡುವೆಯೇ ವಾಶ್ ರೂಂ ಹೋಗುವುದಾಗಿ ಹೇಳಿ ಹೋಗಿದ್ದ ಮೇಘಶ್ರೀ ಏಕಾಏಕಿ ಕಟ್ಟದ ಮೇಲಿಂದ ಹಾರಿದ್ದಾಳಂತೆ ಎಂದು ಕಾಲೇಜು ಮೂಲಗಳು ತಿಳಿಸಿವೆ. ಕೂಡಲೇ ಆಕೆಯನ್ನು ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸಲು ಮುನ್ನವೇ ಮೇಘಶ್ರೀ ಮೃತಪಟ್ಟಿದ್ದಾಳೆ.
ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೇಘಾಶ್ರೀ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಮಗಳನ್ನು ಕಳೆದುಕೊಂಡ ಪೋಷಕರು ಕಾಲೇಜು ಪ್ರಾಂಶುಪಾಲ ಹಾಗೂ ಬೋಧಕ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಡಿಎಸ್ಪಿ ಸುರೇಶ್ ಹಾಗೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ಆಗಮನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.