ಶಿಕ್ಷಣ
ಪರೀಕ್ಷಾಂಗ ಕುಲಸಚಿವರಾದ ಪ್ರೊ. ರಾಜು ಕೃಷ್ಣ ಸಿ ರವರು ಪರೀಕ್ಷಾ ಮೌಲ್ಯಮಾಪನ ಕೇಂದ್ರಕ್ಕೆ ಭೇಟಿ

Views: 0
ಇಂದು ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಪರೀಕ್ಷಾಂಗ ಕುಲಸಚಿವರಾದ ಪ್ರೊ. ರಾಜು ಕೃಷ್ಣ ಸಿ ರವರು ಪರೀಕ್ಷಾ ಮೌಲ್ಯಮಾಪನ ಕೇಂದ್ರಕ್ಕೆ ಭೇಟಿ ನೀಡಿ, ಮೌಲ್ಯಮಾಪಕರೊಂದಿಗೆ ಸಮಾಲೋಚನೆ ನಡೆಸಿದರು. ಮೌಲ್ಯಮಾಪನ ಕೇಂದ್ರಕ್ಕೆ ತಮ್ಮ ಸಿಬ್ಬಂದಿಯರೊಂದಿಗೆ ಆಗಮಿಸಿ, ಸುಮಾರು ಆರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮೌಲ್ಯಮಾಪನ ಮಾಡಿದ ಅಧ್ಯಾಪಕ ವೃಂದದವರಿಗೆ ಚೆಕ್ ವಿತರಣೆಯ ವ್ಯವಸ್ಥೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಮಾನುಷದ ಅಧ್ಯಕ್ಷರಾದ ಡಾ. ಜಯರಾಮ್ ಶೆಟ್ಟಿಗಾರರು ಮಾತನಾಡಿ, ಪರೀಕ್ಷಾಂಗ ಕುಲಸಚಿವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಡೆಪ್ಯುಟಿ ರಿಜಿಸ್ಟರ್ ಶ್ರೀಮತಿ ಲಲಿತ, ಸಹಾಯಕ ಲೆಕ್ಕಾಧಿಕಾರಿ ಶ್ರೀಮತಿ ಹೇಮಲತಾ. , ಅಮುಕ್ತದ ಅಧ್ಯಕ್ಷರಾದ ಪ್ರೊ. ಗಣೇಶ್ ಪೈ ಮತ್ತು ಇತರರು ಹಾಜರಿದ್ದರು.