ಪದ್ಮಶಾಲಿ ಯುವ ವೇದಿಕೆ -19 ನೇ ವಷ೯ದ “ಉಚಿತ ಪುಸ್ತಕ ವಿತರಣೆ “

Views: 1
ಉಡುಪಿ : ಪದ್ಮಶಾಲಿ ಯುವ ವೇದಿಕೆ – ಕಲ್ಯಾಣಪುರ, ಇದರ ವತಿಯಿಂದ 19ನೇ ವರ್ಷದ “ಉಚಿತ ಪುಸ್ತಕ ವಿತರಣೆ” ಕಾರ್ಯಕ್ರಮವು ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ ಸಂತೆಕಟ್ಟೆ ಕಲ್ಯಾಣಪುರದಲ್ಲಿ ನೆರವೇರಿತು.
ಉಚಿತ ಪುಸ್ತಕದ ಸಂಪೂರ್ಣ ವೆಚ್ಚವನ್ನು ದಿ| ಪಿ. ಸಂಜೀವ ಶೆಟ್ಟಿಗಾರ್ ಇವರ ಸ್ಮರಣಾರ್ಥವಾಗಿ ಅವರ ಪತ್ನಿ ಮತ್ತು ಮಕ್ಕಳು (ಸಾಯಿರಾಮ್ ಟೆಕ್ಸ್ ಟೋರಿಯಂ – ಉಡುಪಿ) ಇವರು ಕೊಡಮಾಡಿದರು. ಸುಮಾರು 47 ವಿದ್ಯಾರ್ಥಿಗಳು ಈ ಉಚಿತ ಪುಸ್ತಕ ವಿತರಣೆಗೆ ಅರ್ಜಿಯನ್ನು ಸಲ್ಲಿಸಿದ್ದು, ಇದರ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ.
ವೇದಿಕೆಯಲ್ಲಿ ಯುವ ವೇದಿಕೆಯ ಅಧ್ಯಕ್ಷರಾದ ದಿನೇಶ್ ಶೆಟ್ಟಿಗಾರ್ ಪುತ್ತೂರು, ಶ್ರೀ ರಾಜ್ ನಾರಾಯಣ್ ಶೆಟ್ಟಿಗಾರ್ ಕಿನ್ನಿಮುಲ್ಕಿ (ಸಾಯಿರಾಮ್ ಟೆಕ್ಸ್ ಟೋರಿಯಂ – ಉಡುಪಿ), ದೇವಸ್ಥಾನದ ಮೊಕ್ತೇಸರರಾದ ಶ್ರೀ ಕೆ. ಜ್ಯೋತಿ ಪ್ರಸಾದ್ ವಿ. ಶೆಟ್ಟಿಗಾರ್ ಕಿನ್ನಿಮುಲ್ಕಿ, ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಶೋಭಾ ಜ್ಯೋತಿ ಪ್ರಸಾದ್ ಶೆಟ್ಟಿಗಾರ್, ಹಾಗೂ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ದಯಾನಂದ ಶೆಟ್ಟಿಗಾರ್, ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಕೆ. ಅಶೋಕ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಯುವ ವೇದಿಕೆಯ ಕಾರ್ಯದರ್ಶಿಯಾದ ಶ್ರೀ ವಿಘ್ನೇಶ್ವರ ಪ್ರಸಾದ, ಆತ್ರಾಡಿ ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದವನ್ನು ಸಮರ್ಪಿಸಿದರು. -ವರದಿ: ಬಿ.ವಿ. ಶೆಟ್ಟಿಗಾರ, ಉಡುಪಿ