ಶಿಕ್ಷಣ
ಪದವಿ ತರಗತಿ ಆರಂಭ ಆಗಸ್ಟ್ 23ಕ್ಕೆ ಮಂಗಳೂರು ವಿವಿ ಶೈಕ್ಷಣಿಕ ಆಡಳಿತ ಸಭೆ ನಿರ್ಧಾರ

Views: 0
ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ 2023- 24 ನೇ ಸಾಲಿನ ಪದವಿ ಕಾಲೇಜುಗಳ ತರಗತಿ ಆರಂಭವನ್ನು ಆಗಸ್ಟ್ 14ರ ಬದಲು ಆಗಸ್ಟ್ 23ಕ್ಕೆ ಮುಂದೂಡಿಕೆ ಮಾಡಲು ಮಂಗಳೂರು ವಿವಿ ನಿರ್ಧರಿಸಿದೆ.
ಮಂಗಳವಾರ ಪ್ರಭಾರ ಕುಲಪತಿ ಪ್ರೋ. ಜಯರಾಜ್ ಅಮೀನ್ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಗಸ್ಟ್ 14 ರಂದು ಪದವಿ ತರಗತಿಗಳು ಆರಂಭವಾಗಬೇಕಿತ್ತು.ವಿಪರೀತ ಮಳೆಯ ಕಾರಣದಿಂದಾಗಿ ರದ್ದಾದ ಪರೀಕ್ಷೆಗಳು ಆಗಸ್ಟ್ 14 ಮತ್ತು 16ಕ್ಕೆ ನಡೆಯಲಿದೆ.
ಅಗಸ್ಟ್ 10ರಂದು ಮೌಲ್ಯಮಾಪನ ಆರಂಭಿಸಿ ಆಗಸ್ಟ್ 20ರವರೆಗೆ ನಡೆಯುವ ಸಾಧ್ಯತೆ ಇರುವುದರಿಂದ ಆಗಸ್ಟ್ 23 ರಂದು ತರಗತಿ ಪುನರಾರಂಭಕ್ಕೆ ಅಂತಿಮ ತೀರ್ಮಾನ ಕೈಗೊಂಡು ಶೀಘ್ರವೇ ಪ್ರಕಟಿಸಲಾಗುವುದು ಎಂದು ಪ್ರೋ.ಜಯರಾಜ್ ಅಮೀನ್ ತಿಳಿಸಿದ್ದಾರೆ