ಪಡುಬಿದ್ರಿ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠೆ ಅಷ್ಠಬಂಧ ಬ್ರಹ್ಮಕಲಶಾಭಿಷೇಕ

Views: 1
ಬಾರಕೂರು: ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನ ನಡ್ಸಾಲು ಪಡುಬಿದ್ರಿ ದೇವಳದ ಪುನಃ ಪ್ರತಿಷ್ಠೆ, ಅಷ್ಠಬಂಧ ಬ್ರಹ್ಮ ಕಲಶಾಭಿಷೇಕ ಮೇ. 2 ರಿಂದ 6 ರ ವರೆಗೆ ನಡೆಯಲಿದೆ ಎಂದು ದೇವಳದ ಮೊಕ್ತೇಸರರಾದ ಸುಂದರ ಶೆಟ್ಟಿಗಾರ ಅವರು ತಿಳಿಸಿದ್ದಾರೆ.
ಪಡುಬಿದ್ರಿ ದೇವಳದ ಸಮಿತಿಯ ರಮೇಶ್ ಶೆಟ್ಟಿಗಾರ ಅಧ್ಯಕ್ಷರು, ರವೀಂದ್ರ ಶೆಟ್ಟಿಗಾರ ಕಾಯ೯ದಶಿ೯, ಗಂಗಾದರ ಶೆಟ್ಟಿಗಾರ ಕಾಯಾ೯ಧ್ಯಕ್ಷರು, ಚಿದಾನಂದ ಶೆಟ್ಟಿಗಾರ ಇವರು ಬಾರಕೂರು ಮೂಲ ಕ್ಷೇತ್ರಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿ, ಆಮಂತ್ರಣ ನೀಡಿದರು.
ಬಾರಕೂರು ದೇವಳದ ಸಹ ಮೊಕ್ತೇಸರ ಸಿ. ಕೆ. ವಿನಯ ಕುಮಾರ ಅವರಿಗೆ ಅನುಗ್ರಹ ಪ್ರಸಾದ ನೀಡಿ, ಗೌರವಿಸಿದರು.
ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ನೇತ್ರತ್ವದಲ್ಲಿ
ಮೇ. 2 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ತೋರಣ ಮಹೂತ೯,ಉಗ್ರಾಣ ಮಹೂತ೯, ಗಣಯಾಗ, ಬ್ರಹ್ಮಕೂಚ೯ ಹೋಮ, ಕಂಕಣ ಬಂಧ
ಸಂಜೆ 4:30 ಕ್ಕೆ ಪುಣ್ಯಾಹ ಸಪ್ತ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಸಾದ ಬಲಿ, ಸಂಹಾರ ವಾಸ್ತು.
ಮೇ. 3 ರಂದು ಬೆಳಿಗ್ಗೆ ಪುಣ್ಯಾಹ, ಗ್ರಹ ಶಾಂತಿ, ಸಂಕೋಚ ಪ್ರಕ್ರಿಯೆ, ಬಿಂಬ ಶುದ್ಧಿ,
ಸಂಜೆ 4:30ಕ್ಕೆ ಬಿಂಬಾಧಿವಾಸ, ಮಂಡಲ ಪೂಜೆ, ಶಯ್ಯಾಧಿವಾಸ
ಸಂಜೆ 6 ರಿಂದ ಅಹೋರಾತ್ರಿ ಭಜನೆ
ಮೇ 4 ಕ್ಕೆ ಬೆಳಿಗ್ಗೆ ತತ್ತ್ವ ಹೋಮ, ತತ್ತ್ವ ಕಲಶಾಭಿಷೇಕ, ರುದ್ರ ಯಾಗ ಶಾಂತಿ ಹೋಮ
ಬೆಳಿಗ್ಗೆ 9 ರಿಂದ ಕುಣಿತ ಭಜನೆ
12:30ಕ್ಕೆ ಅನ್ನ ಸಂತಪ೯ಣೆ
ಸಂಜೆ: ದಿಶಾ ಹೋಮ, ಬ್ರಹ್ಮ ಕಲಶಾಧಿವಾಸ, ಅಧಿವಾಸ ಹೋಮ
ಮೇ. 5 ರಂದು ಬೆಳಿಗ್ಗೆ ಚಂಡಿಕಾ ಯಾಗ 9:55ಕ್ಕೆ
ಬ್ರಹ್ಮ ಕಲಶಾಭಿಷೇಕ ಅನ್ನಸಂತರ್ಪಣೆ
ಅಪರಾಹ್ನ 3 ಕ್ಕೆ ಧಾಮಿ೯ಕ ಸಭೆ
ಸಂಜೆ 5:30 ರಿಂದ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ
ಮೇ. 6 ರಂದು ಬೆಳಿಗ್ಗೆ 8ಕ್ಕೆ ಹೂವಿನ ಪೂಜೆ
ರಾತ್ರಿ 10:30 ಕ್ಕೆ ಜುಮಾದಿ ಬಂಟ ದೈವಗಳ ಗಗ್ಗರ ಸೇವೆ ನಡೆಯಲಿದೆ.






