ಜನಮನ

ಪಡಿತರ ಚೀಟಿಯ ಫಲಾನುಭವಿಗಳ ಖಾತೆಗೆ ಹಣ ಸಂದಾಯ

Views: 0

ಅನ್ನಭಾಗ್ಯಕ್ಕೆ ಅಗಸ್ಟ್ ನಲ್ಲೂ ಅಕ್ಕಿ ಸಿಗುವುದು ಅನುಮಾನವಾಗಿದ್ದು, ಹಣವನ್ನೇ ಕೊಡಲು ಸರ್ಕಾರ ನಿರ್ಧರಿಸಿದೆ ಎಂದು ಆಹಾರ ಸಚಿವ ಮುನಿಯಪ್ಪ ತಿಳಿಸಿದ್ದಾರೆ

ಹೆಚ್ಚುವರಿಯಾಗಿ ಬೇಕಿರುವ 2.40 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹೊಂದಿಸುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿದೆ. ಒಂದು ವೇಳೆ ಅಕ್ಕಿ ಸಿಕ್ಕರೆ ಹಣ ನೀಡುವುದನ್ನು ನಿಲ್ಲಿಸಿ ಈಗಿನ ವ್ಯವಸ್ಥೆಯೇ ಮುಂದುವರಿಯಲಿದೆ.

ಒಟ್ಟು 87,96,409 ಪಡಿತರ ಚೀಟಿಯ 3,10,86,328 ಫಲಾನುಭವಿಗಳ ಖಾತೆಗೆ 509.95 ಕೋಟಿ ರೂಪಾಯಿ ಪಾವತಿ ಮಾಡಿದ್ದು, ಶೇ 75 ರಷ್ಟು ಫಲಾನುಭವಿಗಳಿಗೆ ಹಣ ಸಂದಾಯ ಆಗಿದೆ.

ಉಡುಪಿ ಜಿಲ್ಲೆಯ ಫಲಾನುಭವಿಗಳ ಖಾತೆಗೆ ನಾಲ್ಕೈದು ದಿನಗಳಲ್ಲಿ ಹಣ ಜಮೆ ಮಾಡಲಾಗುವುದು ಇನ್ನೊಂದು ವಾರ ಅಥವಾ 10 ದಿನಗಳಲ್ಲಿ ಜುಲೈ ತಿಂಗಳ ಹಣ ಎಲ್ಲರಿಗೂ ತಲುಪಲಿದೆ ಎಂದು ಸಚಿವರು ತಿಳಿಸಿದರು.

ಪಡಿತರ ಚೀಟಿಯನ್ನು ಆಹಾರಧಾನ್ಯ ಪಡೆಯುವುದಕ್ಕಿಂತ ಹೆಚ್ಚಾಗಿ ವೈದ್ಯಕೀಯ ಉದ್ದೇಶಕ್ಕಷ್ಟೇ ಬಳಸುತ್ತಿದ್ದಾರೆ. ಹೀಗಾಗಿ ಪಡಿತರ ಧಾನ್ಯಗಳ ಅಗತ್ಯ ಎಷ್ಟು ಜನರಿಗೆ ಇದೆ ಎಂಬುದನ್ನು ತಿಳಿಯಲು ಸದ್ಯದಲ್ಲೇ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುವುದು ಎಂದರು.

Related Articles

Back to top button
error: Content is protected !!