ಸಾಂಸ್ಕೃತಿಕ
ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವ ಯಕ್ಷಗಾನ ಕಲಾವಿದ

Views: 1370
ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿ ಬಳಿಯ ನೀರ್ಜೆಡ್ಡು ನಿವಾಸಿ ಯುವ ಯಕ್ಷಗಾನ ಕಲಾವಿದ ಗುರುಪ್ರಸಾದ್ ಕುಲಾಲ್ (25) ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಗುರುಪ್ರಸಾದ್ ಕುಲಾಲ್ ಹಲವು ವರ್ಷಗಳ ಕಾಲ ಮಂದಾರ್ತಿ, ಮಾರಣಕಟ್ಟೆ, ಹಾಲಾಡಿ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿದ್ದರು.
ಕಳೆದ ಸಾಲಿನಲ್ಲಿ ಮಾರಣಕಟ್ಟೆ ಮೇಳದಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಹಾಲಾಡಿ ಮೇಳಕ್ಕೆ ಸೇರಿದ್ದ ಯುವ ಪ್ರತಿಭೆ ಗುರುಪ್ರಸಾದ್ ನೀರ್ಜೆಡ್ಡು ಅವರು,
ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ರತಿ, ದೇವಿ ಮಹಾತ್ಮೆಯಲ್ಲಿ ಮಾಲಿನಿ, ಮೋಹಿನಿ ಹೀಗೆ ಹಲವಾರು ಪಾತ್ರಗಳು ಇವರಿಗೆ ಹೆಸರು ತಂದುಕೊಟ್ಟಿತ್ತು, ಇತ್ತಿಚೇಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ‘ಹಂಸ ಪಲ್ಲಕ್ಕಿ’ ಪ್ರಸಂಗದಲ್ಲಿಯೂ ಕಾಣಿಸಿಕೊಂಡಿದ್ದರು.






