ಶಿಕ್ಷಣ
ನೀಟ್ ಪರೀಕ್ಷೆಯಲ್ಲಿ ಅನುತ್ತೀರ್ಣ ತಂದೆ, ಮಗ ಆತ್ಮಹತ್ಯೆ

Views: 1
ನೀಟ್ ಪರೀಕ್ಷೆಯಲ್ಲಿ ಎರಡು ಬಾರಿ ಅನುತ್ತೀರ್ಣಗೊಂಡ 19 ವರ್ಷದ ಮೆಡಿಕಲ್ ವಿದ್ಯಾರ್ಥಿ ಜಗದೀಶ್ವರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ವಿಫಲನಾಗಿದ್ದಾನೆ ಇದರಿಂದ ಆತ ಮಾನಸಿಕ ಒತ್ತಡಕ್ಕೆ ಮತ್ತು ಖಿನ್ನತೆಗೆ ಒಳಗಾಗಿದ್ದಾನೆ ಎಂದು ತಿಳಿದು ಬಂದಿದೆ.
ಮಗನ ವಿಫಲತೆ ಕಂಡು ತಂದೆ ಕೂಡ ಮಗನ ಸಾವಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಗದೀಶ್ವರನ ತಂದೆ ಸೆಲ್ವ ಶೇಖರ್ ನೀಟ್ ಕುರಿತು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಸಾವಿನ ಮೊದಲು ಸೆಲ್ವ ಶೇಖರ್ ಮಾತನಾಡಿ, ನೀಟನ್ನು ತಮಿಳುನಾಡಿನಲ್ಲಿ ಕಿತ್ತೊಗೆಯಲು ನಾನು ಪ್ರತಿಭಟನೆ ಮಾಡಲು ಸಿದ್ದ ಎಂದು ಹೇಳಿದರು.
ಈ ಕುರಿತು ತಮಿಳುನಾಡು ಸಿಎಂ ಅಘಾತ ವ್ಯಕ್ತಪಡಿಸಿದ್ದು, ತಮಿಳುನಾಡಿನಲ್ಲಿ ನೀಟ್ ಬ್ಯಾನ್ ಮಾಡಲು ಅನುಮತಿ ಕೊಟ್ಟಿಲ್ಲ ಎಂದು ಸಿಎಂ ಸ್ಟಾಲಿನ್ ರಾಜ್ಯಪಾಲರಿಗೆ ಮನವಿ ಮಾಡಿ ಕಳುಹಿಸಿದ್ದೇನೆ ಎಂದರು.