ಕರಾವಳಿ

ನಿಶ್ಚಿತಾರ್ಥ ಮುಗಿಸಿ ಹೋದವನು ವಾಪಸ್ ಆಗಿ SSLC ವಿದ್ಯಾರ್ಥಿನಿಯನ್ನು ತಲೆ ಕತ್ತರಿಸಿ ಕೊಂದಿದ್ದೇಕೆ?

Views: 350

ಮಡಿಕೇರಿ: ಕಳೆದ ವರ್ಷದಿಂದನೇ ಪ್ರಕಾಶ, ಮೀನಾಳ ಹಿಂದೆ ಬಿದ್ದು ಪ್ರೀತ್ಸು ಪ್ರೀತ್ಸು ಅಂತ ಪಿಡಿಸುತ್ತಿದ್ದ ಪ್ರಕಾಶನ ಕಾಟಕ್ಕೆ ತಡೆಯಲಾರದೇನೇ ಮೀನಾನೂ ಅವನ ಪ್ರೀತಿಯನ್ನು ಒಪ್ಪಿಕೊಂಡಿದ್ದಳು ಎಂದು ತಿಳಿದು ಬಂದಿದೆ.

ಪ್ರಕಾಶ್, ಅವಳಿಗಾಗಿ ಏನೂ ಮಾಡೋದಕ್ಕೂ ಹಿಂಜರಿಯುತ್ತಿರಲಿಲ್ಲ. ಪ್ರಕಾಶನ ತಾಯಿ ಹೇಳುವ ಪ್ರಕಾರ, ಕಳೆದ ಆರು ತಿಂಗಳಿಂದ ಪ್ರಕಾಶ್, ತಮ್ಮ ಮನೆಯಲ್ಲಿರೋದಕ್ಕಿಂತ ಮೀನಾಳ ಮನೆಯಲ್ಲೇ ಇದ್ದನಂತೆ. ಮೀನಾಳನ್ನ ಓದಿಸೋದು, ಸ್ಕೂಲ್ಗೆ ಕರೆದುಕೊಂಡು ಹೋಗೋದು, ಬರೋದು ಎಲ್ಲವೂ ಅವನೇ ನೋಡಿಕೊಳ್ಳುತ್ತಿದ್ದನಂತೆ. ಅಷ್ಟೇ ಯಾಕೆ  ಎಸ್ಎಸ್ಎಲ್ಸಿ ಪರೀಕ್ಷೆ ಸಮಯದಲ್ಲೂ ಪ್ರಕಾಶನೇ ಕರೆದುಕೊಂಡು ಹೋಗಿ ಕರೆದುಕೊಂಡು ಬರ್ತಿದ್ದನಂತೆ. ಅಷ್ಟರ ಮಟ್ಟಿಗೆ ಮೀನಾಳ ಜೊತೆ ಪ್ರಕಾಶ್ ಪ್ರೀತಿಯಲ್ಲಿ ಬಿದ್ದಿದ್ದ.

34 ವರ್ಷದ ಪ್ರಕಾಶ್, 16ರ ಮೀನಾನ ಮದುವೆ ಮಾಡಿಕೊಡಿ ಅಂತ ಡಿಮ್ಯಾಂಡ್ ಮಾಡಿದ್ದ. ಮನೆಯವರು, ಮಗಳು ಓದುತ್ತಿದ್ದಾಳೆ ಇನ್ನೊಂದೆರಡು ವರ್ಷ ಬೇಡ, ಆಮೇಲೆ ಮದುವೆ ಮಾಡೋಣ ಅಂತಿದ್ದರು. ಆದರೆ ಪ್ರಕಾಶನಿಗೆ ಇನ್ನು ಎರಡು ವರ್ಷ ಕಾಯುವ ತಾಳ್ಮೆ ಇರಲಿಲ್ಲ. ಬಲವಂತ ಮಾಡಿ ಪ್ರೀತಿಗೆ ಒಪ್ಪಿಸಿದ್ದ. ಮನೆಯವರನ್ನು ಬಲವಂತವಾಗಿ ಒಪ್ಪಿಸಿ ನಿಶ್ಚಿತಾರ್ಥಗೆ ಮುಹೂರ್ತ ಇಡಿಸಿದ್ದ. ನಿಗದಿಯಂತೆ ಗುರುವಾರ ಬೆಳಗ್ಗೆ ಮೀನಾ ಮತ್ತು ಪ್ರಕಾಶನ ನಿಶ್ಚಿತಾರ್ಥ ನಡೆಯಬೇಕಿತ್ತು. ಆಗಲೇ ನೋಡಿ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದೋಗುತ್ತೆ.

16 ವರ್ಷದ ಮೀನಾಳಗೆ ಮದುವೆ ಮಾಡ್ತಿದ್ದಾರೆ ಅನ್ನೊ ಸುದ್ದಿ ಪೊಲೀಸರ ಕಿವಿಗೆ ಬೀಳುತ್ತೆ. ಅಪ್ತಾಪ್ತೆ ಬಾಲಕಿಗೆ ಬಲವಂತವಾಗಿ ಮದುವೆ ಮಾಡಿಸ್ತಿದ್ದಾರೆ ಅನ್ನೋ ವಿಚಾರ ಗಮನಕ್ಕೆ ಬರ್ತಿದ್ದಂತೆ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಬಂದು ಅಡ್ಡಿ ಪಡಿಸಿದ್ದರು.

ಹುಡುಗಿ ಮೇಜರ್ ಆಗೋವರೆಗೂ ವೇಯ್ಟ್ ಮಾಡಿ, ಇಲ್ಲ ಅಂದ್ರೆ ಕಾನೂನಿನ ಪ್ರಕಾರ ಆ್ಯಕ್ಷನ್ ತಗೋಬೇಕಾಗುತ್ತದೆ ಅಂತ ವಾರ್ನ್ ಮಾಡಿ ಹೋದರು. ಅಷ್ಟಕ್ಕೇ ಆತಂಕಗೊಂಡ ಮೀನಾ ಮನೆಯವರು ಅವಸರ ಅವಸರದಲ್ಲಿ ನಿಶ್ಚಿತಾರ್ಥ ಮಾಡಿ ಮುಗಿಸಿದ್ರು.

ಪ್ರಕಾಶನಿಗೆ ಯಾರೋ ಉದ್ದೇಶಪೂರ್ವಕವಾಗಿ ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿಸಿದ್ರು ಅನ್ನೋ ಮಾತು ಕಿವಿಗೆ ಬಿದ್ದಿದೆ.

ಸಂಜೆ ವೇಳೆಗೆ ಮೀನಾ ಮನೆಗೆ ವಾಪಸ್ ಬಂದಿದ್ದ ಪ್ರಕಾಶ್, ಕೋವಿ ಹಾಗೂ ಮರ ಕಡಿಯುವ ಮಚ್ಚು ಹಿಡಿದು ಬಂದಿದ್ದ. ಬಂದವನೇ ಮೀನಾಳ ಜೊತೆ ಜಗಳ ತೆಗೆದಿದ್ದಾನೆ. ನೀನೇ ಪೊಲೀಸರಿಗೆ ಹೇಳಿದ್ದಿಯಾ ಅಂತ ಖ್ಯಾತೆ ತೆಗೆದು ಹಲ್ಲೆ ಮಾಡಿದ್ದಾನೆ. ಮಗಳನ್ನು ಹೊಡಿತಿದ್ದಾನೆ ಅಂತ ಅಡ್ಡ ಹೋದ ಮೀನಾಳ ತಾಯಿ ಮೇಲೂ ಮಚ್ಚು ಬೀಸಿದ್ದ. ಈ ವೇಳೆ ತಾಯಿಯ ಕೈ ತುಂಡಾಗಿತ್ತು. ಅಡ್ಡ ಬಂದ ಮೀನಾಳ ತಂದೆ ಮೇಲೂ ಹಲ್ಲೆ ಮಾಡಿದ್ದ.

ಪ್ರಕಾಶನ ಆರ್ಭಟಕ್ಕೆ ತಂದೆ-ತಾಯಿ ಇಬ್ಬರೂ ಗಾಯಗೊಂಡು ಮನೆಯೊಳಗೆ ಬಿದ್ದರೇ, ಮೀನಾಳನ್ನ ಎಳೆದುಕೊಂಡು ಹೊರಹೋಗಿದ್ದ. ಇನ್ನು ಮನೆಯಲ್ಲಿ ತಂದೆ-ತಾಯಿ ಹಾಗೂ ಮೀನಾ ಬಿಟ್ಟರೇ ಬೇರೆ ಯಾರೂ ಇರಲಿಲ್ಲವಂತೆ. ಗಾಯಗೊಂಡು ಮನೆಯೊಳಗೆ ತಂದೆ-ತಾಯಿ ಬಿದ್ದಿದ್ದರೆ ಮನೆ ಹೊರಗೆ ಮೀನಾಳ ಆರ್ತನಾದ ಅಪ್ಪ-ಅಮ್ಮನಿಗೆ ಕೇಳಿಸಿತ್ತಂತೆ. ಮೀನಾಳ ತಲೆ ತುಂಡರಿಸಿದ್ದ

Related Articles

Back to top button
error: Content is protected !!