ಇತರೆ
ನಿವೃತ್ತ ಪ್ರಾಚಾರ್ಯ ದಿ. ಎ.ನಾರಾಯಣ ಆಚಾರ್ಯರ ವೈಕುಂಠ ಸಮಾರಾಧನೆಯ ಮರುದಿನವೇ ಪತ್ನಿ ಸಾವು
Views: 122
ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥರಾಗಿ ಮತ್ತು ಸುದೀರ್ಘ ಅವಧಿಗೆ ಪ್ರಾಚಾರ್ಯರಾಗಿ ಹಿಂದಿನವರು ಮುನ್ನಡೆಸಿಕೊಂಡು ಬಂದು ಪಠ್ಯದ ಜೊತೆಗೇ ಸದಭಿರುಚಿಯ ಚಟುವಟಿಕೆಗಳನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಬಂದು ಕಾಲೇಜನ್ನು ನಾಡಿನ ಗಮನಸೆಳೆಯುವ ಶಿಕ್ಷಣ ಸಂಸ್ಥೆಯಾಗಿ ರೂಪಿಸುವಲ್ಲಿ ಅಪಾರ ಶ್ರಮಿಸಿದ್ದ ನಿವೃತ್ತ ಪ್ರಾಚಾರ್ಯ ದಿ| ಪ್ರೊ| ಎ.ನಾರಾಯಣ ಆಚಾರ್ಯರು ನಿಧನ ಹೊಂದಿ ವೈಕುಂಠ ಸಮಾರಾಧನೆ ನಡೆದ ಮರುದಿನವೇ ಅವರ ಪತ್ನಿ ಶಾಂತಾ ಆಚಾರ್ಯ (82) ಜ.2ರಂದು ಅಂಬಲಪಾಡಿ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಕರ್ನಾಟಕ ಸಂಗೀತ ವಿದುಷಿಯಾಗಿದ್ದ ಶಾಂತಾ ಅವರು ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು. ಹೊಲಿಗೆ ಕಸೂತಿಯನ್ನೂ ಬಲ್ಲವರಾಗಿದ್ದರು.






