ಶಿಕ್ಷಣ
ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಒಂಬತ್ತನೇ ತರಗತಿಯ ಮೂವರು ವಿದ್ಯಾರ್ಥಿಗಳು ಸಾವು

Views: 179
ಕನ್ನಡ ಕರಾವಳಿ ಸುದ್ದಿ: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಮೂವರು ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ತಮಿಳುನಾಡು ಹೊಸೂರಿನ ಮತ್ತಿಗೆರೆ ರಸ್ತೆಯಲ್ಲಿ ನಡೆದಿದೆ.
ಮದನ್ ಕುಮಾರ್, ಹರೀಶ್ ಕುಮಾರ್, ಅರಿಯನ್ ಸಿಂಗ್ ಮೃತ ವಿದ್ಯಾರ್ಥಿಗಳು. ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ಇವರು ಶಾಲೆ ಬಿಟ್ಟ ಬಳಿಕ ಮೂವರು ಸ್ನೇಹಿತರು ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಮಾಡಿದ್ದರು.
ಈ ವೇಳೆ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ದುರಂತ ಅಂತ್ಯ ಸಂಭವಿಸಿದೆ. ಸದ್ಯ ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಕೃಷ್ಣಗಿರಿ ಜಿಲ್ಲಾ ಎಸ್ಪಿ ರಾಣತುರೈ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.