ಇತರೆ

ನಾಪತ್ತೆಯಾದ ತಾಯಿ ಮಗುವಿನ ಶವ ಕೆರೆಯಲ್ಲಿ ಶವ ಪತ್ತೆ: ಸಾವಿನಲ್ಲಿ ಸಂಶಯ! ತಾಯಿ ದೂರು 

Views: 119

ಕನ್ನಡ ಕರಾವಳಿ ಸುದ್ದಿ: ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ  ಕೊಡಿಯಾಲ ಗ್ರಾಮದ ಆರ್ವಾರ ಎಂಬಲ್ಲಿ ತಾಯಿ ತನ್ನ ಮೂರು ವರ್ಷದ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ತನ್ನ ಮಗಳ ಸಾವಿನಲ್ಲಿ ಸಂಶಯ ಇದೆಯೆಂದು ಯುವತಿ ತಾಯಿ ದೂರು ನೀಡಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಯತೀಶ್ ಆರ್ವಾರ್ ಅವರ ಸೋದರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಮತ್ತು ಆಕೆಯ ಪುತ್ರಿ ಧೃತಿ (3) ಮೃತಪಟ್ಟವರು. ಮಧುಶ್ರೀ ಪುತ್ತೂರಿನ ಬೆಟ್ಟಂಪಾಡಿ ಗ್ರಾಮದ ರುಕ್ಕಯ್ಯ ಗೌಡ ಹಾಗೂ ರತ್ನಾವತಿ ದಂಪತಿಯ ಪುತ್ರಿ.

ಸ್ಥಳೀಯರ ಮಾಹಿತಿ ಪ್ರಕಾರ, ಶನಿವಾರ ರಾತ್ರಿ ಎಲ್ಲರೊಂದಿಗೆ ಮಧುಶ್ರೀ ಊಟ ಮುಗಿಸಿ ಮಲಗಿದ್ದರು. ಬೆಳಿಗ್ಗೆ ನೋಡಿದಾಗ ತಾಯಿ, ಮಗು ಇರಲಿಲ್ಲ. ಮನೆಯವರು ಹುಡುಕಾಡಿದಾಗ ಇಬ್ಬರ ಶವಗಳು ಬಾವಿಯಲ್ಲಿ ಪತ್ತೆಯಾಗಿವೆ. ಎಲ್ಲರೂ ನಿದ್ದೆಯಲ್ಲಿದ್ದಾಗ ಈಕೆ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ಮಗಳ ಸಾವಿನ ಬಗ್ಗೆ ಹೆತ್ತವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು ಬೆಳ್ಳಾರೆ ಪೊಲೀಸರು ಮನೆಯವರನ್ನು ತನಿಖೆ ನಡೆಸುತ್ತಿದ್ದಾರೆ

ಮೃತ ಮಹಿಳೆಯ ತಂದೆ ಪುತ್ತೂರು ತಾಲೂಕಿನ ರುಕ್ಷ್ಮಯ್ಯ ಗೌಡ ಅವರು ನನ್ನ ಮಗಳು ಆಕೆಯ ಮಗುವಿನೊಂದಿಗೆ(3 ವರ್ಷ) ಕೆರೆಗೆ ಹಾರಿ ಮೃತಪಟ್ಟಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಅದರಂತೆ ದಿನಾಂಕ 4.1.2026 ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 01/2026 ಕಲಂ: 103 BNS-2023 ರಂತೆ ಪ್ರಕರಣ ದಾಖಲಾಗಿದೆ.

ಇನ್ನು ಮೃತ ಮಹಿಳೆಯ ತಾಯಿ ರತ್ನಾವತಿ ಅವರು ದೂರು ನೀಡಿದ್ದು ತನ್ನ ಮಗಳ ಮರಣದಲ್ಲಿ ಸಂಶಯವಿದೆ ಎಂದಿದ್ದಾರೆ. ಇದೀಗ ಈ ಘಟನೆಗೆ ಸಂಬಂದಿಸಿದಂತೆ ಎರಡೂ ದೂರುಗಳನ್ನು ದಾಖಲಿಸಿಕೊಂಡಿರುವ ಬೆಳ್ಳಾರೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Related Articles

Back to top button
error: Content is protected !!