ಸಾಂಸ್ಕೃತಿಕ

“ನನಗೆ ಮದುವೆ ಫಿಕ್ಸ್ ಆಗಿದೆ” ಶಾಕಿಂಗ್ ವಿಚಾರ ಬಿಚ್ಚಿಟ್ಟ ಚೈತ್ರಾ ಕುಂದಾಪುರ!

Views: 300

ಕನ್ನಡ ಕರಾವಳಿ ಸುದ್ದಿ: ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಮಾತಿನಿಂದಲೇ ಪ್ರಭಾವ ಬೀರುತ್ತಿರುವ ಸ್ಪರ್ಧಿ. ಚೈತ್ರಾ ಕುಂದಾಪುರ ಫೈರ್‌ ಬ್ರ್ಯಾಂಡ್‌ ಎಂದೇ ಹೆಸರು ಪಡೆದವರು. ಮಾತಲ್ಲೇ ಎಲ್ಲರನ್ನೂ ಗೆಲ್ಲುವ ತಾಕತ್ತಿರುವ ಚೈತ್ರಾ ಕುಂದಾಪುರ ಒಂದು ಸಂಗತಿಯನ್ನು ರಿವೀಲ್‌ ಮಾಡಿದ್ದಾರೆ.

ಬಿಗ್ ಬಾಸ್’ ಒಳಗೆ ಹೋದಾಗ ಕೆಲವರ ಮಧ್ಯೆ ಆಪ್ತತೆ ಬೆಳೆಯುತ್ತದೆ. ಇದನ್ನು ಪ್ರೀತಿ ಎಂದು ಬಿಂಬಿಸುವ ಕೆಲಸ ಆಗುತ್ತದೆ. ಇದು ಕೆಲವರಿಗೆ ಇಷ್ಟ ಆದರೆ, ಇನ್ನೂ ಕೆಲವರಿಗೆ ಇಷ್ಟ ಆಗುವುದಿಲ್ಲ. ಚೈತ್ರಾ ಕುಂದಾಪುರಗೆ ಈ ವಿಚಾರದಲ್ಲಿ ನಂಬಿಕೆ ಇಲ್ಲ. ತಮ್ಮ ವಿಚಾರದಲ್ಲಿ ಯಾರಾದರೂ ಕಥೆ ಕಟ್ಟೋಕೆ ಬಂದರೆ ಸರಿ ಇರಲ್ಲ ಎಂದು ಅವರು ಹೇಳಿದ್ದಾರೆ

ಚೈತ್ರಾ, ಹಂಸಾ ಹಾಗೂ ಮಾನಸಾ ಮೂವರೂ ಬೆಡ್‌ ರೂಮಿನಲ್ಲಿ ಮಾತನಾಡುತ್ತ ಕುಳಿತಿರುತ್ತಾರೆ. ಈ ವೇಳೆ ಶಾಕಿಂಗ್‌ ವಿಚಾರವೊಂದನ್ನು ಚೈತ್ರಾ ಕುಂದಾಪುರ ಬಿಚ್ಚಿಟ್ಟಿದ್ದಾರೆ.

ʻʻನನ್ನದು, ರಂಜಿತ್ ಹಾಗೂ ತ್ರಿವಿಕ್ರಮ್‌ ದು ಲವ್‌ಸ್ಟೋರಿ ಎಂದು ಸುರೇಶ್ ಹೇಳಿದರು. ಹೀಗೆಲ್ಲ ಹೇಳೋದು ಸರಿಯಲ್ಲ. ಇದು ಕಷ್ಟ ಆಗುತ್ತೆ. ಅವರು ಯಾರ ಬಗ್ಗೆಯೂ ಮಾತನಾಡಲ್ಲʼʼ ಎಂದು ಹಂಸ ಹೇಳಿದ್ದಾರೆ.

ʻʻಹಾಗಾಗಿ ಅವರ ಜೊತೆ ಯಾಕೆ ಕ್ಲೋಸ್ ಆದೆ. ಸುರೇಶ್ ಜೊತೆ ಕುಳಿತರೆ ನೆಗೆಟಿವ್ ವೈಬ್ಸ್ ಬರುತ್ತೆ. ಈ ಕಾರಣಕ್ಕೆ ರಂಜಿತ್ ಹಾಗೂ ತ್ರಿವಿಕ್ರಮ್ ಜೊತೆ ಕೂರುತ್ತಿದ್ದೆʼʼ ಎಂದು ಹಂಸ ಹೇಳಿದ್ದಾರೆ.

ʻʻನಾನು ಸಹ ವಿಕ್ಕಿ ಜೊತೆ ಕ್ಲೋಸ್ ಇದ್ದೇನೆ. ಅನೇಕ ಬಾರಿ ಸುರೇಶ್ ಅಣ್ಣ ಇದನ್ನು ಹೇಳ್ತಾನೆ ಇದ್ದಾರೆ. ನನ್ನ ವಿಚಾರದಲ್ಲಿ ಲವ್‌ಸ್ಟೋರಿ ಅಂತೆಲ್ಲ ಯಾರೇ ಅಂದರೂ ಮೆಟ್ಟು ತೆಗೆದುಕೊಂಡು ಹೊಡೆಯುತ್ತೇನೆʼʼ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.

ʻʻಮದುವೆ ಫಿಕ್ಸ್ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ಯಾರ ಜೊತೆಯೂ ಸಂಬಂಧ ಕಟ್ಟೋದಕ್ಕೂ ನಾನು ಬಿಡಲ್ಲʼʼ ಎಂದರು ಚೈತ್ರಾ ಕುಂದಾಪುರ ಹೇಳಿದ್ದಾರೆ.

ಈ ಮಾತುಕತೆಯಲ್ಲಿ ಬಿಗ್‌ ಬಾಸ್‌ ವೀಕ್ಷಕರಿಗೆ ಚೈತ್ರಾ ಕುಂದಾಪುರ ಮದುವೆ ಫಿಕ್ಸ್ ಆಗಿರುವ ಸತ್ಯ ತಿಳಿದಿದೆ. ಚೈತ್ರಾ ಕುಂದಾಪುರ ಕೈ ಹಿಡಿಯಲಿರುವ ಆ ವರ ಯಾರು ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

 

 

 

 

 

Related Articles

Back to top button
error: Content is protected !!