ಧರ್ಮಸ್ಥಳ ಬುರುಡೆ ರಹಸ್ಯ: ಎರಡನೇ ಪಾಯಿಂಟ್ನಲ್ಲೂ ಸಿಕ್ಕಿಲ್ಲ ಕುರುಹು, ಅನಾಮಿಕ ದೂರುದಾರ ಹಿಡಿದ ಪಟ್ಟೇನು?

Views: 255
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದಲ್ಲಿ ಬುರುಡೆ ರಹಸ್ಯ ಬೆನ್ನತ್ತಿರುವ ಎಸ್ಐಟಿ ಇವತ್ತು 2ನೇ ಪಾಯಿಂಟ್ನಲ್ಲಿ ಮಣ್ಣು ತೋಡಿದೆ. ಅಲ್ಲೂ ಏನೂ ಪತ್ತೆಯಾಗಿಲ್ಲ. ಮೊದಲೆರಡು ಕಡೆ ಏನೂ ಪತ್ತೆಯಾಗದ ಕಾರಣ ಈಗ ಮೂರನೇ ಪಾಯಿಂಟ್ ಬಳಿ ಮಣ್ಣು ಅಗೆಯಲು ಕಾರ್ಮಿಕರು ಮುಂದಾಗಿದ್ದಾರೆ.
ಅನಾಮಿಕ ಗುರುತಿಸಿದ ಪ್ರದೇಶಕ್ಕೆ ಪ್ರಣವ್ ಮೊಹಾಂತಿ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮತ್ತೊಂದು ಕಡೆ ತನಿಖೆಗೆ ಟ್ವಿಸ್ಟ್ ಸಿಕ್ಕಿದೆ. ಕೇಸ್ ನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳುಕು ಹಾಕಿಕೊಂಡಿದೆ.
ಎರಡು ದಿನಗಳ ಕಾಲ ನಡೆದ ಎಸ್ಐಟಿ ವಿಚಾರಣೆ ವೇಳೆ ಅನಾಮಿಕ ದೂರುದಾರ ಹಲವರ ಹೆಸರನ್ನು ಉಲ್ಲೇಖಿಸಿದ್ದಾನೆ. ಅದರಲ್ಲಿ ಮಂಗಳೂರಿನ ಪೊಲೀಸ್ ಔಟ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಹೆಸರನ್ನು ದೂರುದಾರ ಉಲ್ಲೇಖಿಸಿದ್ದಾನೆ. ಅದರಂತೆ ಇದೀಗ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
9, 10, 11ನೇ ಪಾಯಿಂಟ್ನಲ್ಲಿ ಅಗೆಯಲು ಪಟ್ಟು
ಯಾವಾಗ ಎರಡೂ ಪಾಯಿಂಟ್ನಲ್ಲಿ 6ಅಡಿ ಗುಂಡಿ ಅಗೆದರೂ ಏನೂ ಸಿಗಲಿಲ್ಲ ಎಂದಾಗ ಸ್ಪಾಟ್ 9, 10, 11 ಈ ಮೂರು ಸ್ಥಳದಲ್ಲಿ ಉತ್ಪನನ ಮಾಡಿ ಎಂದು ಅನಾಮಿಕ ಹೇಳಿದ್ದಾನಂತೆ. ಆದ್ರೆ ಸೀರಿಯಲ್ ಪ್ರಕಾರವೇ ಉತ್ಪನನ ಮಾಡುತ್ತೇವೆ ಎಂದು ಎಸಿ ವರ್ಗೀಸ್ ಸೂಚನೆ ನೀಡಿದ್ದಾರೆ.






