ಇತರೆ

ಧರ್ಮಸ್ಥಳ ಬುರುಡೆ ಕೇಸ್ ಗೆ ಬಿಗ್ ಟ್ವಿಸ್ಟ್: ಮಾಸ್ಕ್‌ಮ್ಯಾನ್ ಚಿನ್ನಯ್ಯ ಬಂಧನ

Views: 206

ಕನ್ನಡ ಕರಾವಳಿ ಸುದ್ದಿ: ಶವ ಹೂತಿದ್ದಾಗಿ ಮಾಸ್ಕ್‌ಮ್ಯಾನ್ ಚಿನ್ನಯ್ಯ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಕಾಣಿಸಿಕೊಂಡಿದ್ದ ಅನಾಮಿಕ ಮಾಸ್ಕ್‌ಮ್ಯಾನ್ ಇದೀಗ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಪೊಲೀಸರು ನಿನ್ನೆ ಸುಮಾರು 19 ಗಂಟೆಗಳ ಕಾಲ ಆತನನ್ನು ವಿಚಾರಣೆ ಮಾಡಲಾಗಿತ್ತು.

ದೂರುದಾರನಾಗಿದ್ದ  ಮಾಸ್ಕ್‌ಮ್ಯಾನ್ ನನ್ನು ವಿಶೇಷ ತನಿಖಾ ದಳ (ಎಸ್ಐಟಿ)ದ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ತಲೆ ಬುರುಡೆಯನ್ನು ನ್ಯಾಯಾಲಯಕ್ಕೆ ತಂದಿದ್ದ ಕೇಸ್ ನಲ್ಲಿ ಮಾಸ್ಕ್‌ಮ್ಯಾನ್  ನನ್ನು ಬಂಧಿಸಲಾಗಿದೆ.

ಎಸ್ಐಟಿ ಅಧಿಕಾರಿಗಳು ಬಂಧನ ಬಳಿಕ‌ ಮಾಸ್ಕ್ ಮ್ಯಾನ್ ಹೆಸರು ರವೀಲ್ ಮಾಡಿದ್ದು ಆತನ ಹೆಸರು ಸಿ.ಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಎಂದು ಬಂಧನದಲ್ಲಿ ಉಲ್ಲೇಖ ಮಾಡಲಾಗಿದೆ. ಆರೋಪಿ ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕಿನ ಚಿಕ್ಕಬೆಳ್ಳಿ ನಿವಾಸಿ ಆಗಿದ್ದಾನೆ. ನ್ಯಾಯಾಲಯದಲ್ಲಿ ಪ್ರಕರಣದ ಮತ್ತಷ್ಟು ವಿಚಾರಣೆಗೆ ಕಸ್ಟಡಿಗೆ ನೀಡಬೇಕು ಎಂದು ಎಸ್ಐಟಿ ಅಧಿಕಾರಿಗಳು ಕೇಳಲಿದ್ದಾರೆ. ತನಿಖೆ ವೇಳೆ ಹಲವರ ಹೆಸರು ಬಾಯಿಬಿಟ್ಟಿರೋ ಸಾಧ್ಯತೆ ಇದೆ.

ಮಾಸ್ಕ್‌ಮ್ಯಾನ್  ಹೇಳಿರುವ ಅವರ ಬಗ್ಗೆ ಕೂಲಂಕುಷವಾಗಿ ಮಾಹಿತಿ ಸಂಗ್ರಹಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ತನ್ನ ಹಿಂದಿನ ಟೀಮ್ ಬಗ್ಗೆ ಚಿನ್ನಯ್ಯ ಬಾಯಿ ಬಿಟ್ಟಿದ್ದಾನೆ. ಹೀಗಾಗಿ ಅವರು ಯಾರು ಅನ್ನೋ ಬಗ್ಗೆ ವಿಚಾರಣೆ ನಡೆಸಬೇಕಾಗಿದೆ. ಹೀಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಲಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.

Related Articles

Back to top button