ಧರ್ಮಸ್ಥಳದಲ್ಲಿ 37 ವರ್ಷಗಳಲ್ಲಿ 279 ಶವಗಳನ್ನು ಹೂಳಲಾಗಿದೆ! ಗ್ರಾಮ ಪಂಚಾಯತ್ ಮಾಹಿತಿ

Views: 128
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ಆಸುಪಾಸಿನಲ್ಲಿ ಅತ್ಯಾಚಾರ ಕೊಲೆ ನಡೆಸಿ ನೂರಾರು ಹೆಣ್ಣು ಮಕ್ಕಳ ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ಹಿನ್ನೆಲೆ ಈ ಕುರಿತು ಗ್ರಾಮ ಪಂಚಾಯಿತಿ ಅಧಿಕೃತ ಮಾಹಿತಿ ಕೊಟ್ಟಿದ್ದು 37 ವರ್ಷಗಳಲ್ಲಿ 279 ಶವ ಹೂಳಲಾಗಿದೆ ಎಂದಿದೆ.
1987 ರಿಂದ 2025 ಧರ್ಮಸ್ಥಳ ಆಸುಪಾಸಿನಲ್ಲಿ ಶಿಶುಗಳನ್ನೂ ಸೇರಿದಂತೆ 279 ಶವಗಳನ್ನು ಹೂಳಲಾಗಿದೆ. ಇವುಗಳಲ್ಲಿ ಹೆಚ್ಚಿನವು ಆತ್ಮಹತ್ಯೆ ಪ್ರಕರಣಗಳು ಎಂದು ಆರ್ಟಿಐನಡಿ ಪಂಚಾಯಿತಿ ಮಾಹಿತಿ ಕೊಟ್ಟಿದೆ. 279 ಅನಾಥ ಶವಗಳಲ್ಲಿ 219 ಪುರುಷರ ಶವಗಳು, 46 ಮಹಿಳೆಯರ ಶವ, ಶಿಶುಗಳನ್ನು ಸೇರಿದಂತೆ 14 ಶವಗಳ ಲಿಂಗವನ್ನು ಗುರುತಿಸಲು ಸಾಧ್ಯವಾಗಿಲ್ಲ ಎನ್ನುವ ಮಾಹಿತಿಯನ್ನು ಧರ್ಮಸ್ಥಳ ಗ್ರಾಮ ಪಂಚಾಯಿತಿಯಿಂದ ಆರ್ಟಿಐ ಅಡಿಯಲ್ಲಿ ಮಾಹಿತಿ ಕೊಟ್ಟಿದ್ದಾರೆ.
2003-2004, 2006-2007 ಮತ್ತು2014-2015ರ ಅವಧಿಯಲ್ಲಿ 17 ಅನಾಥ ಶವಗಳನ್ನು ಹೂಳಲಾಗಿದೆ. 2015-25 ವರೆಗೆ 10 ವರ್ಷಗಳಿಂದ 101 ಅನಾಥ ಶವಗಳನ್ನು ಹೂಳಲಾಗಿದೆ. ಧರ್ಮಸ್ಥಳದ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂದಿನ ವೈದ್ಯರೊಬ್ಬರ ಪ್ರಕಾರ ಶವಗಳು ಕಾಡಿನೊಳಗೆ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ಹಕ್ಕಿನಡಿ ಗ್ರಾಮ ಪಂಚಾಯಿತಿಯೇ ಮಾಹಿತಿ ನೀಡಿದೆ.