ಇತರೆ

ದೇವಸ್ಥಾನದ ಆವರಣದಲ್ಲಿ ಜೆಡಿಎಸ್ ಮುಖಂಡನ ಹತ್ಯೆಗೆ ಯತ್ನ

Views: 1

ಹಾಸನ ಜಿಲ್ಲೆಯಲ್ಲಿ ಕೃಷ್ಣೇಗೌಡ ಎಂಬ ಗ್ರಾನೆಟ್ ಉದ್ಯಮಿಯನ್ನು ಕೊಲೆ ಮಾಡಿದ ಬೆನ್ನಲ್ಲೇ ಇದೀಗ ಮಂಡ್ಯದ ಮದ್ದೂರಿನಲ್ಲಿ ಜೆಡಿಎಸ್ ಮುಖಂಡರೊಬ್ಬರನ್ನು ದೇವಸ್ಥಾನದ ವಠಾರದಲ್ಲಿ ಕೊಲೆ ಯತ್ನ ನಡೆದಿದೆ.

ಶನಿವಾರ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಜೆಡಿಎಸ್ ಮುಖಂಡ ಅಪ್ಪುಗೌಡ ಅವರ ಕೊಲೆ ಯತ್ನ ನಡೆದಿದೆ ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪ್ಪು ಗೌಡ ಮಂಡ್ಯದ ಮುದ್ದೂರಿನಲ್ಲಿ ಸ್ಥಳೀಯವಾಗಿ ಜನಪ್ರಿಯತೆ ಹೊಂದಿದ್ದರು. ಅಪ್ಪು ಗೌಡ ದೇವ ದರ್ಶನ ಮುಗಿಸಿ ಹೊರಗೆ ಬರುತ್ತಿದ್ದಂತೆಯೇ ಕಾದು ಕುಳಿತಿದ್ದ ಇಬ್ಬರು ಡ್ಯಾಗರ್ ಮತ್ತು ಲಾಂಗ್ ಹಿಡಿದುಕೊಂಡು ಅವರ ಮೇಲೆ ಮುಗಿಬಿದ್ದಿದ್ದಾರೆ. ಒಬ್ಬ ಡ್ರ್ಯಾಗರನಿಂದ ಚುಚ್ಚಿದ್ದಾನೆ. ಅಪ್ಪುಗೌಡ ಜೊತೆಯಲ್ಲಿದ್ದವರು ಓಡಿ ಬಂದು ಅವರ ರಕ್ಷಣೆಗೆ ನಿಂತಿದ್ದರಿಂದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!