ದಳಪತಿ ವಿಜಯ್ ಸಂಗೀತಾ ಮತ್ತೆ ಒಂದಾಗುವ ಸುದ್ದಿ ಕೇಳಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮ!
Views: 23
ಕನ್ನಡ ಕರಾವಳಿ ಸುದ್ದಿ: ತಮಿಳುನಾಡು ಸಿಎಂ ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್ ಕೇಸ್ ಕೋರ್ಟ್ ಮೇಟ್ಟಿಲೇರಿದೆ. ಈ ಸಮಯದಲ್ಲಿ ವಿಜಯ್ ದಂಪತಿ ಕುರಿತ ಹೊಸ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, ಹಲವು ತಿಂಗಳುಗಳಿಂದ ಹಬ್ಬಿದ್ದ ಬೇರ್ಪಡುವಿಕೆಯ ಊಹಾಪೋಹಗಳ ನಂತರ ದಂಪತಿ ಮತ್ತೆ ಒಂದಾಗಿದ್ದಾರೆ ಅನ್ಮೊ ವರದಿಯಾಗಿದೆ
ವಿಜಯ್ ವೈಯಕ್ತಿ ಜೀವನ ಮತ್ತೆ ಮುನ್ನಲೆಗೆ ಬಂದಿದ್ದು, ವಿಜಯ್ ಮತ್ತು ಸಂಗೀತಾ ಮತ್ತೆ ಒಂದಾಗಿದ್ದಾರೆ ಎಂಬ ವರದಿಗಳ ಅವರ ಸಂಬಂಧ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ವಿಜಯ್ ಅವರ ಹಲವು ಸಾರ್ವಜನಿಕ ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ ಸಂಗೀತಾ ಗೈರಾಗಿದ್ದರು. ಇಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳು ಹರಿದಾಡುತ್ತಿದೆ. ಇದೀಗ ಕುಟುಂಬ ಸದಸ್ಯರು ಇಬ್ಬರನ್ನು ಒಂದು ಮಾಡಲು ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗ್ತಿದೆ.
ಚುನಾವಣೆಗೆ ಮುನ್ನ ವಿಜಯ್ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಿದರು. ಅವರ ಪತ್ನಿ ಸಂಗೀತಾ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದಕ್ಕೆ ಕಾರಣ ತ್ರಿಶಾ ಜೊತೆಗಿನ ಸಂಬಂಧ ಬಹಿರಂಗಪಡಿಸಿದರು. ಇದು ಇಬ್ಬರೂ ಬೇರೆಯಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ಕಾರಣವಾಯಿತು. ಆದಾಗ್ಯೂ, ವಿಜಯ್ ಮುಖ್ಯಮಂತ್ರಿಯಾದ ನಂತರ, ಎಲ್ಲವೂ ಬದಲಾಗುತ್ತಿದೆ. ಅನೇಕ ವಿಷಯಗಳು ತಲೆಕೆಳಗಾಗುತ್ತಿವೆ. ಅದೇ ರೀತಿ, ಈಗ ಅವರ ಕೌಟುಂಬಿಕ ವಿಷಯವೂ ತಲೆಕೆಳಗಾಗುತ್ತಿದೆ. ಈ ಅನುಕ್ರಮದಲ್ಲಿ, ದಂಪತಿಗಳು ಮತ್ತೆ ಒಂದಾಗಿದ್ದಾರೆ ಎಂಬ ಸುದ್ದಿ ಬರುತ್ತಿದಂತೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಸದ್ಯ ಹರಿದಾಡುತ್ತಿರುವ ವರದಿ ಪ್ರಕಾರ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಸೇರಿದಂತೆ ಅವರ ಕುಟುಂಬದವರು ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ತಿಳಿಸಲಾಗಿದೆ. ಇನ್ನೂ ಸಂಗೀತಾ ಚೆನ್ನೈಗೆ ಹಿಂತಿರುಗಿದ್ದಾರೆ ದಂಪತಿ ಈಗಾಗಲ್ಲೇ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಸಿಎಂ ವಿಜಯ್ ವೈಯಕ್ತಿಕ ಜೀವನದ ಭವಿಷ್ಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದು, ಮತ್ತೆ ವಿಜಯ್ ಸಂಗೀತಾ ಒಂದಾಗುವ ಸುದ್ದಿ ಕೇಳಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ.






