ಸಾಂಸ್ಕೃತಿಕ
ದರ್ಶನ್ ಮತ್ತು ಗ್ಯಾಂಗ್; ಜೈಲಿನಲ್ಲಿರುವ 4ನೇ ಆರೋಪಿ ರಾಘವೇಂದ್ರನ ತಾಯಿ ನಿಧನ

Views: 115
ನಟ ದರ್ಶನ್ ಹಾಗೂ ಗ್ಯಾಂಗ್ ಸೇರಿ ರೇಣುಕಾಸ್ವಾಮಿಯನ್ನು ಹತ್ಯೆಗೈದಿರುವ ಆರೋಪದಲ್ಲಿರುವಾಗ ಪ್ರಕರಣ ಸಂಬಂಧ 17 ಜನ ಆರೋಪಿಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸದ್ಯ ನಾಲ್ಕನೇ ಆರೋಪಿ ರಾಘವೇಂದ್ರನ ತಾಯಿ ಕೊನೆಯುಸಿರೆಳೆದಿದ್ದಾರೆ.
ಪ್ರಕರಣದ ಆರೋಪಿ A4 ರಘು ತಾಯಿ ಮಂಜುಳಮ್ಮ (75) ಇಂದು(ಜುಲೈ 20) ಬೆಳಗ್ಗೆ ಮೃತಪಟ್ಟಿದ್ದಾರೆ. ಆತ ಚಿತ್ರದುರ್ಗ ಜಿಲ್ಲಾ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗಿದ್ದ. ಮಾನಸಿಕ ಅಸ್ವಸ್ಥತೆ, ವಯೋಸಹಜ ಕಾಯಿಲೆಯಿಂದ ಮಂಜುಳಮ್ಮ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ. ರಾಘವೇಂದ್ರನ ತಾಯಿ ಚಿತ್ರದುರ್ಗದ ಕೋಳಿಬುರುಜನಹಟ್ಟಿ ಮನೆಯಲ್ಲಿ ವಾಸವಿದ್ದರು. ರಘು ಸಹೋದರ ಮುರುಳಿ ತಾಯಿಯ ಆರೈಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.






