ಯುವಜನ

ತ್ರಿಕೋನ ಪ್ರೇಮ ಕೊಲೆಯಲ್ಲಿ ಅಂತ್ಯ

Views: 84

ತ್ರಿಕೋನ ಪ್ರೇಮ ಕೊಲೆಯಲ್ಲಿ ಅಂತ್ಯವಾದ ಘಟನೆ ದೆಹಲಿಯಲ್ಲಿ ನಡೆದಿದೆ. ಉತ್ತರ ಭಾಗದ ಭಗೀರತಿ ವಿಹಾರ್​ ಎಂಬಲ್ಲಿ ಒಬ್ಬಳಿಗಾಗಿ ಇಬ್ಬರು ಬಡಿದಾಡಿಕೊಂಡಿದ್ದಾರೆ. ಕೊನೆಗೆ ಮಹೀರ್​ ಅಲಿಯಾಸ್​ ಇಮ್ರಾನ್​ ಎಂಬಾತ ಘಟನೆಯಲ್ಲಿ ಸಾವನ್ನಪ್ಪಿದ್ದಾನೆ.

ಕೊಲೆಗಾರ ಅರ್ಮಾನ್​ ಖಾನ್​ಗೆ (18) ಇನ್​ಸ್ಟಾಗ್ರಾಂನಲ್ಲಿ 21 ವರ್ಷದ ಯುವತಿಯೊಬ್ಬಳ ಮೇಲೆ ಲವ್​ ಆಗುತ್ತದೆ. ಆಕೆಯ ಜೊತೆಗೆ ಡೇಟ್​ ಕೂಡ ಮಾಡುತ್ತಿದ್ದನು. ಆದರೆ ಅದೇ ಯುವತಿಯನ್ನು ಮಹೀರ್ ಕೂಡ ಇಷ್ಟಪಟ್ಟಿದ್ದು, ಕೊನೆಗೆ ಒಬ್ಬಳಿಗಾಗಿ ಇಬ್ಬರ ಜಗಳದಿಂದ ಮಹೀರ್​ ಸಾವನ್ನಪ್ಪಿದ್ದಾನೆ.

ಯಾವಾಗ ಅರ್ಮಾನ್​ಗೆ ತಾನು ಇಷ್ಟಪಟ್ಟ ಹುಡುಗಿಯ ಜೊತೆಗೆ ಮಹೀರ್​ ಡೇಟ್​ ಮಾಡುತ್ತಿರುವ ವಿಚಾರ ಗೊತ್ತಾಗುತ್ತದೆಯೋ. ವಿಚಾರ ದೊಡ್ಡದಾಗುತ್ತದೆ. ಅರ್ಮಾನ್​ ಮತ್ತು ಮಹೀರ್​ ವಾದಕ್ಕಿಳಿಯುತ್ತಾರೆ. ಕೊನೆಗೆ ಮಹೀರ್​ ಜೊತೆಗೆ ಯುವತಿ ವಿಡಿಯೋ ಕರೆಯಲ್ಲಿರುವುದನ್ನು ಕಂಡ ಅರ್ಮನ್​ ಆಕೆಯ ಬಳಿಯಿಂದ ಮೊಬೈಲ್​ ಕಿತ್ತುಕೊಂಡು ಹೋಗುತ್ತಾನೆ.

ಯುವತಿಯ ಕೈಯಿಂದ ಮೊಬೈಲ್​ ಕಿತ್ತುಕೊಂಡು ಕೊನೆಗೆ ಮಹೀರ್​ಗೆ ಕರೆ ಮಾಡಿ ಆಕೆಯ ಫೋನ್​ ಹಿಂತಿರುಗಿಸುತ್ತೇನೆ. ನಾನು ಹೇಳಿದ ಸ್ಥಳಕ್ಕೆ ಬಂದು ಮೊಬೈಲ್​ ತೆಗೆದುಕೊಂಡು ಹೋಗು ಎಮದು ಹೇಳುತ್ತಾನೆ. ಅದರಂತಯೇ ಬಂದ ಮಹೀರ್​ನನ್ನು ಅರ್ಮಾನ್​ ಚುಚ್ಚಿ ಕೊಲೆ ಮಾಡುತ್ತಾನೆ.

ಸದ್ಯ ಪೊಲೀಸರು ಅರ್ಮಾನ್​ ಮತ್ತು ಆತನ ಸ್ನೇಹಿತರಾದ ಫೈಜಲ್​(21), ಮೊಹಮ್ಮದ್​ ಶಮೀರ್​(19)ನನ್ನು ಬಂಧಿಸಿದ್ದಾರೆ.

Related Articles

Back to top button
error: Content is protected !!