ಮಾಹಿತಿ ತಂತ್ರಜ್ಞಾನ

ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕ ಸುಂದರಿಯ ಬಲೆಗೆ ಬಿದ್ದು ಕೋಟ್ಯಾಂತರ ರೂ. ಕಳೆದುಕೊಂಡ ಯುವಕ

Views: 110

ಕನ್ನಡ ಕರಾವಳಿ ಸುದ್ದಿ: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿದ್ದ ಯುವತಿ, ಟೆಕ್ಕಿಗೆ 1.66 ಕೋಟಿ ರೂ. ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ನೀಲಾದ್ರಿನಗರ ನಿವಾಸಿ ಸೌರವ್ ದುಬೆ (32) ಹಣ ಕಳೆದುಕೊಂಡ ಖಾಸಗಿ ಕಂಪನಿ ಉದ್ಯೋಗಿ. ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾಗಿದ್ದ ಅಪರಿಚಿತ ರಿಯಾ ಅಗರ್ವಾಲ್ ವಿರುದ್ಧ ನಗರದ ಆಗ್ನೆಯ ಸೆನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೌರವ್, ‘ಟಂಟನ್ ಡೇಟಿಂಗ್ ಆ್ಯಪ್ ಬಳಸುತ್ತಿದ್ದ. ಈ ವೇಳೆ ರಿಯಾ ಅಗರ್ವಾಲ್ ಎಂಬಾಕೆಯ ಪರಿಚಯವಾಗುತ್ತದೆ. ಆಗ ರಿಯಾ ಮತ್ತು ಟೆಕ್ಕಿಯ ನಡುವೆ ಆತ್ಮೀಯತೆ ದಿನದಿಂದ ದಿನ ಹೆಚ್ಚುತ್ತದೆ. ಕೊನೆಗೆ ಆ ಯುವತಿ ನಿನ್ನನ್ನೇ ಮದುವೆ ಆಗುತ್ತೇನೆಂದು ಟೆಕ್ಕಿಗೆ ಬಲವಾಗಿ ನಂಬಿಸಿದ್ದಳು.

ಬಣ್ಣದ ಮಾತಿಗೆ ಮರಳಾಗಿದ್ದ ಸೌರವ್, ಅವಳ ಪ್ರತಿ ಮಾತಿಗೂ ತಲೆ ಬಾಗಿ ನಡೆಯುತ್ತಿದ್ದ. ಇದನ್ನೇ ಅಸ್ತ್ರವಾಗಿಸಿಕೊಂಡ ಅವಳು, ವ್ಯಾಟ್ಸಪ್, ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂನಲ್ಲಿ ಸಂಪರ್ಕ ಸಾಧಿಸಿಕೊಂಡು ಆತ್ಮೀಯತೆ ಹೆಚ್ಚಿಸಿಕೊಂಡು ಟೆಕ್ಕಿಗೆ ಬಕ್ರಾ ಮಾಡಿದ್ದು, ಫೆ 5ರಿಂದ ಮೇ 9ರ ವರೆಗೆ ಆನ್‌ಲೈನ್ ಮುಖೇನ ಸಂಪರ್ಕದಲ್ಲಿದ್ದು, ಬರೊಬ್ಬರಿ 1,66,37,000 ರೂ.ಗಳಷ್ಟು ವಂಚಿಸಿದ್ದಾಳೆ.

ಬಲವಾಗಿ ನಂಬಿದ್ದ ಟೆಕ್ಕಿಗೆ, ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅತೀ ಕಡಿಮೆ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಲಾಭ ಗಳಿಸಬಹುದೆಂದು ಆಮಿಷ ಒಡ್ಡಿದ್ದರಿಂದ ಕೋಟ್ಯಂತರ ರೂ.ಗಳನ್ನು ಹೂಡಿಕೆ ಮಾಡಿದ್ದಾನೆ. ಕೊನೆಗೆ ಲಾಭದ ಮೊತ್ತ ಮತ್ತು ಅಸಲು ಹಣ ಹಿಂದಿರುಗಿಸುವಂತೆ ಮನವಿ ಮಾಡಿಕೊಂಡಾಗ ಆಕೆ ತನ್ನ ಮನ್ ಸ್ವೀಚ್ ಆಪ್ ಮಾಡಿಕೊಂಡು ಈತನ ಸಂಪರ್ಕದಿಂದ ದೂರವಾದ ಬಳಿಕ ತಾನು ಸಂಪೂರ್ಣ ಮೋಸ ಹೋಗಿದ್ದೇನೆಂದು ತಿಳಿದು ಆಗ್ನಿಯ ವಿಭಾಗದ ಸೈಬ‌ರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

Related Articles

Back to top button
error: Content is protected !!