ಶಿಕ್ಷಣ

ಡಿ. 24 ರಂದು ವಕ್ವಾಡಿ ಸ.ಹಿ.ಪ್ರಾ.ಶಾಲೆ ಶತಮಾನೋತ್ಸವ ಸಂಭ್ರಮ ಶತಾಬ್ಧಿ-2023

Views: 1

ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಕ್ವಾಡಿ. ಶತಮಾನೋತ್ಸವ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘ ಇದರ ಸಹಯೋಗದಲ್ಲಿ ಶತಮಾನೋತ್ಸವ ಕಾರ್ಯಕ್ರಮ ಶತಾಬ್ದಿ- 2023 ಡಿ.24 ರಂದು ಆದಿತ್ಯವಾರ ನಡೆಯಲಿದೆ.

ಡಿ. 24 ನೇ ಆದಿತ್ಯವಾರ ಬೆಳಿಗ್ಗೆ 9 ಕ್ಕೆ ಧ್ವಜಾರೋಹಣ ಮತ್ತು ಬಹುಮಾನ ವಿತರಣೆ

ಕಾಳಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿ ಶೇರಿಗಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೋಟೇಶ್ವರ ಪ್ರಖ್ಯಾತ ಸಿವಿಲ್ ಇಂಜಿನಿಯರ್ ಶ್ರೀ ಮೊಳಹಳ್ಳಿ ಸುಬ್ಬಣ್ಣ ಶೆಟ್ಟಿ ಇವರಿಂದ ಧ್ವಜಾರೋಹಣ

ಮುಖ್ಯ ಅತಿಥಿಗಳಾಗಿ ಉದ್ಯಮಿ ಕಾಸರಗೋಡು ಮನೆ -ವಕ್ವಾಡಿ ಶ್ರೀ ವಿಶ್ವನಾಥ ಶೆಟ್ಟಿ, ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶ್ರೀಕೃಷ್ಣ ಐತಾಳ್, ನಿವ್ರತ್ತ ಪದವೀಧರ ಮುಖ್ಯೋಪಾಧ್ಯಾಯ ಶ್ರೀ ರತ್ನಾಕರ್ ಶೆಟ್ಟಿ, ಮಾಜಿ ಪಂಚಾಯತ್ ಸದಸ್ಯರಾದ ಶ್ರೀ ನರಸಿಂಹ ಪೂಜಾರಿ,ಕುಂದಾಪುರ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ಶ್ರೀ ಅಶೋಕ್ ನಾಯಕ್, ಕೋಟೇಶ್ವರ ವೃತ್ತದ ಶಿಕ್ಷಣ ಸಂಯೋಜಕರಾದ ಶ್ರೀ ಸಂತೋಷ್ ಪೂಜಾರಿ, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಪ್ರಕಾಶ್ ಜೋಗಿ ಭಾಗವಹಿಸುವರು.

ರಾತ್ರಿ 8ಕ್ಕೆ ಸಭಾ ಕಾರ್ಯಕ್ರಮ:  ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ ಇವರಿಂದ ಕಂಪ್ಯೂಟರ್ ಕಲಿಕಾ ಕೇಂದ್ರ ಉದ್ಘಾಟನೆ, ಮುಖ್ಯ ಅತಿಥಿಗಳಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಶ್ರೀ.ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕರು ಶ್ರೀ ವಿನಯ್ ಕುಮಾರ್ ಸೊರಕೆ, ಕುಂದಾಪುರ ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕಾಳವಾರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಂಜುನಾಥ ಶೆಟ್ಟಿಗಾರ್, ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಉಡುಪಿ ಶ್ರೀ ಕೆ ಗಣಪತಿ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರು ಪ್ರವೀಣ್ ಕುಮಾರ್ ಶೆಟ್ಟಿ ದುಬೈ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೋಭಾ. ಎಸ್ ಶೆಟ್ಟಿ, ಕಾಳಾವರ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ, ಪಂಚಾಯತ್ ಸದಸ್ಯೆ ಶ್ರೀಮತಿ ಭಾರತಿ, ಕುಂದಾಪುರ ತಾಲೂಕು ಕ.ರಾ.ಪ್ರಾ.ಶಾ.ಶಿ.ಸಂಘ ಅಧ್ಯಕ್ಷರಾದ ಶ್ರೀ ಗಣೇಶ್ ಕುಮಾರ್ ಶೆಟ್ಟಿ ಭಾಗವಹಿಸಲಿದ್ದಾರೆ.

ಸಂಜೆ 6ಕ್ಕೆ ಅಂಗನವಾಡಿ ಮತ್ತು ಎಲ್ ಕೆ ಜಿ ಮತ್ತು ಯುಕೆ ಜಿ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ. ಶಾಲಾ ವಿದ್ಯಾರ್ಥಿಗಳಿಂದ ನಾಟಕ, ವಕ್ವಾಡಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ವೈವಿಧ್ಯ, ಹಳೆ ವಿದ್ಯಾರ್ಥಿಗಳಿಂದ ನಾಟಕ ನಡೆಯಲಿದೆ.ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತ್ಯರಂಜನ್ ಹೆಗ್ಡೆ ತಿಳಿಸಿದ್ದಾರೆ.

Related Articles

Back to top button