ಡಾ.ಜಯರಾಮ್ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಮಾನುಷ ವಾರ್ಷಿಕ ಮಹಾಸಭೆ

Views: 0
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳ ಇತಿಹಾಸ ಅಧ್ಯಾಪಕರ ಸಂಘ, ಮಾನುಷ ಇದರ ವಾರ್ಷಿಕ ಮಹಾಸಭೆಯು ಮಾನುಷದ ಅಧ್ಯಕ್ಷರಾದ ಡಾ. ಜಯರಾಮ್ ಶೆಟ್ಟಿಗಾರ್ ಇವರ ಅಧ್ಯಕ್ಷತೆಯಲ್ಲಿ ಶ್ರೀರಾಮಕೃಷ್ಣ ಕಾಲೇಜು ಮಂಗಳೂರು ಇಲ್ಲಿಯ ಸಭಾಂಗಣದಲ್ಲಿ ಜರಗಿತು.
ಉಪಾಧ್ಯಕ್ಷರಾದ ಶ್ರೀಮತಿ ಲತಾ ನಾಯಕ್ ಸರ್ವರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಡಾ. ನವೀನ್ ಕೊಣಾಜೆ ವಾರ್ಷಿಕ ವರದಿಯನ್ನು ಮಂಡಿಸಿದರು. ಶ್ರೀ ಪ್ರೇಮನಾಥ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಶ್ರೀ ರಾಮಕೃಷ್ಣ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮೂರು ದಶಕಗಳಿಗೂ ಹೆಚ್ಚು ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಸೇವಾ ನಿವೃತ್ತರಾದ ಡಾ.ಸುಜಯ ಸುವರ್ಣ, ಪ್ರೊ. ಝಬೇರ್, ಪ್ರೊ. ಟಿ ಮುರುಗೇಶ್, ಪ್ರೊ ಸಂಪತ್ ಕುಮಾರ್ ಇವರ ಸೇವೆಯನ್ನು ದಾಖಲಿಸಲಾಯಿತು.
ಇತ್ತೀಚೆಗೆ ನಿಧನರಾದ ಮಂಗಳೂರು ವಿ ವಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಉದಯ ಬಾರ್ಕೂರು ಇವರಿಗೆ ನುಡಿ ನಮನ ಸಲ್ಲಿಸಲಾಯಿತು.
ರಾಷ್ಟ್ರೀಯ ಶಿಕ್ಷಣ ನೀತಿಯ ಹೊಸ ಪಠ್ಯಕ್ರಮದಂತೆ ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್ ಸಂಬಂಧಿಸಿದ ಇತಿಹಾಸ ಪಠ್ಯಕ್ರಮದ ಕುರಿತಂತೆ ಕಾರ್ಯಗಾರವನ್ನು ನಡೆಸಿಕೊಟ್ಟ ಡಾ. ಸತೀಶ್ ಗಟ್ಟಿ ಹಾಗೂ ಡಾ. ನವೀನ್ ಕೊಣಾಜೆ, ಅಧ್ಯಯನ ಸಾಮಗ್ರಿಗಳು ಮತ್ತು ಮಾದರಿ ಪ್ರಶ್ನೆಗಳನ್ನು ತಯಾರಿಸುವಲ್ಲಿ ಸಂಯೋಜಕರಾಗಿ ಕಾರ್ಯನಿರ್ವಹಿಸಿದ ಡಾ ಸೀತಾರಾಮ್ , ಶ್ರೀಮತಿ ಮಧುಶ್ರೀ, ಶ್ರೀಮತಿ ಪದ್ಮಶ್ರೀ, ಶ್ರೀಮತಿ ಲತಾ ನಾಯಕ್, ಡಾ. ಅಶೋಕ್ ಡಿಸೋಜ ಮತ್ತು ಡಾ.ಪ್ರಸಾದ್ ಹಾಗೂ ವಿಶೇಷ ಸೇವೆಗೈದ ಪ್ರೊ. ಗಣೇಶ್ ಪೈ ಬಾರ್ಕೂರು, ಡಾ. ವಿಜಯಲಕ್ಷ್ಮೀ , ಶ್ರೀ ಲೋಕೇಶ್ ಹಾಗೂ ಶ್ರೀ ಬಾಲಚಂದ್ರ ಇವರನ್ನು ಗೌರವಿಸಲಾಯಿತು.
ರಾಷ್ಟ್ರೀಯ ಶಿಕ್ಷಣ ನೀತಿಯ ಹೊಸ ಪಠ್ಯಕ್ರಮದಂತೆ ಐದು ಮತ್ತು ಆರನೇ ಸೆಮಿಸ್ಟರ್ ಸಂಬಂಧಿಸಿದ ರಾಜ್ಯಮಟ್ಟದ ಎರಡು ಕಾರ್ಯಗಾರವನ್ನು ನಡೆಸಲು, ಸಪ್ಟಂಬರ್ ತಿಂಗಳ ಮೊದಲ ವಾರದಲ್ಲಿ ಹೆರಿಟೇಜ್ ವಾಕ್ ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನಡೆಸಲು ನಿರ್ಣಯಿಸಲಾಯಿತು.
2023-2024ನೇ ಸಾಲಿನ ಪದಾಧಿಕಾರಿಗಳು:
ಅಧ್ಯಕ್ಷರು : ಡಾ. ಜಯರಾಮ್ ಶೆಟ್ಟಿಗಾರ್ ಕಲ್ಯಾಣಪುರ,
ಉಪಾಧ್ಯಕ್ಷರು : ಶ್ರೀಮತಿ ಸುನಿತಾ ನಾಯಕ್ ಹೆಬ್ರಿ, ಶ್ರೀ ತ್ಯಾಗರಾಜ್ ಟಿಎಲ್ ಕೊಡಗು,
ಪ್ರಧಾನ ಕಾರ್ಯದರ್ಶಿಗಳು: ಡಾ. ನವೀನ್ ಕೋಣಾಜೆ, ಮಂಗಳೂರು,
ಖಜಾಂಚಿ : ಡಾ ಗುರುರಾಜ್ ಪ್ರಭು ಉಡುಪಿ
ಜೊತೆ ಕಾರ್ಯದರ್ಶಿ: ಪ್ರೊ. ಪದ್ಮಶ್ರೀ, ಬೆಳ್ತಂಗಡಿ