ಇತರೆ
ಟ್ರ್ಯಾಕ್ಟರ್ ರೋಟೋವೇಟರ್ಗೆ ಸಿಲುಕಿ ದೇಹ ಛಿದ್ರಗೊಂಡ ಚಾಲಕ

Views: 43
ಕನ್ನಡ ಕರಾವಳಿ ಸುದ್ದಿ: ಟ್ರ್ಯಾಕ್ಟರ್ ರೋಟೋವೇಟರ್ ಗೆ ಸಿಲುಕಿ ಯುವಕನ ದೇಹ ಛಿದ್ರಗೊಂಡ ಘಟನೆ ಜಿಲ್ಲೆಯ ಹಾವೇರಿಯಲ್ಲಿ ನಡೆದಿದೆ.
ಶಿವಾನಂದ ಹುಣಸಿಮರದ (30) ರೋಟೋವೇಟರ್ ಸಿಲುಕಿ ಮೃತಪಟ್ಟ ಚಾಲಕ.
ಭಾನುವಾರ ರಾತ್ರಿ ಜಮೀನು ಉಳುಮೆ ತೆರಳಿದ್ದ ಯುವಕ, ಟ್ರ್ಯಾಕ್ಟರ್ ಮೂಲಕ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ.ಈ ವೇಳೆ ರೋಟೋವೇಟರ್ ಮೇಲೆ ಕುಳಿತಿದ್ದ ಶಿವಾನಂದ ದಿಢೀರನೆ ಆಯತಪ್ಪಿ ರೋಟೋವೇಟರ್ ಒಳಗೆ ಸಿಲುಕಿದ್ದಾನೆ. ರೋಟೋವೇಟರ್ ಗೆ ಸಿಲುಕಿದ ಶಿವಾನಂದ ಹುಣಸಿಮರದ ದೇಹ ಹೊಲದಲ್ಲಿ ಛಿದ್ರ ಛಿದ್ರವಾಗಿ ಪತ್ತೆಯಾಗಿದೆ.
ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






