ಜೆಡಿಎಸ್ ನವರು ಯಾವ ಪಕ್ಷಕ್ಕೆ ಹೋಗುತ್ತಾರೋ ಆ ಪಕ್ಷ ಸರ್ವನಾಶ: ವೀರಪ್ಪ ಮೊಯ್ಲಿ

Views: 0
ಮಂಗಳೂರು: ಜೆಡಿಎಸ್ ಪಕ್ಷ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೋ ಆ ಪಕ್ಷಕ್ಕೆ ಒಡು ಹೊಕ್ಕಿದಂತೆ ಎಂದು ಬಿಜೆಪಿ ಜೊತೆಗೆ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿರುವುದಕ್ಕೆ ಮಾಜಿ ಮಂತ್ರಿ ಎಂ ವೀರಪ್ಪ ಮೊಯ್ಲಿ ಅವರು ವ್ಯಂಗ್ಯ ಮಾಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವೀರಪ್ಪ ಮೊಯ್ಲಿ ಅವರು, ನಮ್ಮ ತುಳು ಭಾಷೆಯಲ್ಲಿ ಒಂದು ಗಾದೆ ಮಾತಿದೆ.
ಯಾವ ಮನೆಗೆ ಒಡು ಹೋಗುತ್ತದೆಯೋ ಅದು ಸರ್ವನಾಶವಾಗಿ ಹೋಗುತ್ತದೆ ಅಂತ. ಜೆಡಿಎಸ್ ಪಕ್ಷ ಕೂಡಾ ಒಂದು ಒಡು ಇದ್ದಂತೆ.
ಅವರು ಎಲ್ಲಿಗೆ ಹೋಗುತ್ತಾರೋ ಅದು ಸರ್ವನಾಶವಾಗಿ ಹೋಗುತ್ತದೆ. ಈಗ ಅವರು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ.
ಬಿಜೆಪಿಯೂ ಸರ್ವ ನಾಶವಾಗಿ ಹೋಗುತ್ತದೆ. ನಮಗೆ ಬಹಳ ಕಟು ಅನುಭವ ಆಗಿದೆ. ಈ ಹಿಂದೆ 28ರಲ್ಲಿ 1 ಸೀಟು ಲೋಕಸಭೆಯಲ್ಲಿ ಬಂದದ್ದು ಇಲ್ವೇ ಇಲ್ಲ. ಹೊಂದಾಣಿಕೆ ಬಿ ಟೀಮ್ ಎಂದು ಹೇಳುತ್ತಿದ್ದರು.
ಆ ದಾರಿದ್ರ್ಯ ನಮ್ಮ ಪಕ್ಷಕ್ಕೆ ಬರುವುದೇ ಇಲ್ಲ ಎಂದು ಕುಮಾರ ಸ್ವಾಮಿ ಹೇಳಿದ್ದರು. ಈಗ ಅವರಿಗೆ ದಾರಿದ್ರ್ಯ ಒಳಗೆ ಸೇರಿದೆ.
ಅವರ ಜೊತೆ ಸೇರಿದ ಸಂದರ್ಭ ನಾನು ಸೋತೆ, ಖರ್ಗೆ, ಮುನಿಯಪ್ಪ ಸೋತರು, ಮುನಿಯಪ್ಪ ಕೂಡಾ ಸೋತರು. ಈಗ ಅನಿಷ್ಟ ನಮ್ಮಿಂದ ದೂರ ಆಗಿದೆ ಎಂದರು.
ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಟೀಕೆ ಮಾಡುತ್ತಿರುವ ರಾಜ್ಯ ಸಭಾ ಸದಸ್ಯ ಬಿಕೆ ಹರಿಪ್ರಸಾದ್ ಅವರ ಕುರಿತ ಪ್ರಶ್ನೆಗೆ ಉತ್ತರಿಸಿದ ಮೊಯ್ಲಿ, ಆಯಾಯ ಪಕ್ಷದ ವೇದಿಕೆಯಲ್ಲೇ ಚರ್ಚೆ ಮಾಡಬೇಕು. ಹೊರತು, ಬೇರೆ ಕಡೆ ಚರ್ಚೆ ಮಾಡಿದರೆ ಅದು ಅಶಿಸ್ತು ಆಗುತ್ತದೆ. ಇದು ಸರಿಯಲ್ಲ ಎಂದರು.






