ಆರ್ಥಿಕ

ಜಿಯೋ ದರ ಜಾಸ್ತಿ ಮಾಡಿದ ಮರುದಿನವೇ ಏರ್‌ಟೆಲ್ ದರವೂ ಏರಿಕೆ!

Views: 136

ನವದೆಹಲಿ: ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್‌ ದರ ಏರಿಕೆ ಮಾಡಿದ ಬೆನ್ನಲ್ಲೇ ಏರ್‌ಟೆಲ್ ಕೂಡ ತನ್ನ ಗ್ರಾಹಕರಿಗೆ ಬಿಗ್‌ ಶಾಕ್ ಕೊಟ್ಟಿದೆ. ಏರ್‌ಟೆಲ್‌ ಕಂಪನಿ ಮೊಬೈಲ್ ಟಾರಿಫ್ ಪ್ಲಾನ್‌ಗಳ ದರ ಏರಿಕೆ ಮಾಡಿದೆ. ಹೊಸ ದರ ಏರಿಕೆ ಮುಂದಿನ ಜುಲೈ 3ರಿಂದ ಜಾರಿಗೆ ಬರುತ್ತಿದೆ.

ದರ ಏರಿಕೆಯ ನಿರ್ಧಾರವನ್ನ ಭಾರತಿ ಏರ್‌ಟೆಲ್ ಕಂಪನಿ ಸಮರ್ಥಿಸಿಕೊಂಡಿದೆ. ಭಾರತದ ಟೆಲಿಕಾಂ ವ್ಯವಹಾರದಲ್ಲಿ ನೆಟ್‌ವರ್ಕ್ ತಂತ್ರಜ್ಞಾನ ಮತ್ತು ಸ್ಪೆಕ್ಟ್ರಂಗಳ ಬಂಡವಾಳ ಹೂಡಿಕೆಗೆ ಇದೊಂದು ಸಾಧಾರಣ ಪ್ರಕ್ರಿಯೆ ಆಗಿದೆ. ಗ್ರಾಹಕರ ಬಜೆಟ್‌ ಹೊರೆ ಆಗುವಂತ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಏರ್‌ಟೆಲ್ ಕಂಪನಿ ತನ್ನ ಗ್ರಾಹಕರಿಗೆ ಜಿಯೋದಂತೆ ಶೇಕಡಾ 11-21ರಷ್ಟು ದರ ಏರಿಕೆ ಮಾಡುವುದಾಗಿ ಘೋಷಣೆ ಮಾಡಿದೆ. ಅಂದ್ರೆ ಇಷ್ಟು 179 ರೂಪಾಯಿ ಇದ್ದ 28 ದಿನದ ಚಂದದಾರರು 199 ರೂಪಾಯಿ ಪಾವತಿಸಬೇಕು. 265 ರೂಪಾಯಿ ಪಾವತಿಸುತ್ತಿದ್ದ ಟಾರಿಫ್ ಪ್ಲಾನ್ 299 ರೂಪಾಯಿಗೆ ಏರಿಕೆಯಾಗಿದೆ.

Related Articles

Back to top button
error: Content is protected !!