ಧಾರ್ಮಿಕ
ಜಾತ್ರೆಯ ವೇಳೆ ಕುಸಿದು ಬಿದ್ದ120 ಅಡಿ ಎತ್ತರದ ತೇರು

Views: 59
ಆನೇಕಲ್: ಜಾತ್ರೆಯ ವೇಳೆ ಬೃಹತ್ ಗಾತ್ರದ ತೇರು ಕುಸಿದ ಬಿದ್ದ ಘಟನೆ ಕಮ್ಮಸಂದ್ರ ಬಳಿಯ ಹೈಪರ್ ಮಾರ್ಕೆಟ್ ಬಳಿ ನಡೆದಿದೆ. ಹುಸ್ಕೂರು ಮದ್ದುರಮ್ಮ ಜಾತ್ರೆಯಲ್ಲಿ ಈ ಘಟನೆ ನಡೆದಿದೆ.
ಸುಮಾರು 120 ಅಡಿ ಎತ್ತರದ ತೇರು ಇದಾಗಿದ್ದು, ಎತ್ತುಗಳು ಮತ್ತು ಟ್ರಾಕ್ಟರ್ ನೆರವಿನಿಂದ ಎಳೆದು ತರಲಾಗುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ತೇರು ಎಡಕ್ಕೆ ಉರುಳಿಬಿದ್ದಿದೆ.
ತೇರು ಹಿಲಲಿಗೆ ಗ್ರಾಮದಿಂದ ಹುಸ್ಕೂರಿಗೆ ಬರುತ್ತಿತ್ತು. ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿ ಬಳಿ ಬಂದಂತೆ ಉರುಳಿಬಿದ್ದಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.






