ಚೈತ್ರ ಕುಂದಾಪುರಗೆ ಬಿಗ್ಬಾಸ್ ಮನೆಯಿಂದ ಆದಷ್ಟು ಬೇಗ ಹೊರ ಹಾಕುವಂತೆ ಕಲರ್ಸ್ ವಾಹಿನಿಗೆ ನೋಟಿಸ್!

Views: 589
ಕುಂದಾಪುರ: ಬಿಗ್ಬಾಸ್ ಮನೆಯಿಂದ ಚೈತ್ರ ಕುಂದಾಪುರ ಅವರನ್ನು ಆದಷ್ಟು ಬೇಗ ಹೊರ ಹಾಕುವಂತೆ ಕಲರ್ಸ್ ವಾಹಿನಿಗೆ ವಕೀಲರು ನೋಟಿಸ್ ನೀಡಿದ್ದಾರೆ.

ಈ ಕುರಿತು ಖ್ಯಾತ ವಕೀಲರಾದ ಭೋಜರಾಜ್ ಅವರು ಮಾತನಾಡಿ, ಸಮಾಜಕ್ಕೆ ದುಷ್ಪರಿಣಾಮ ಬೀರುವ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಭಾಗವಹಿಸಲು ಅವಕಾಶ ನೀಡಿದ ವಾಹಿನಿಗೆ ಸಮಾಜಕ್ಕೆ ಏನು ಸಂದೇಶ ನೀಡಬಹುದು.. ಇದು ತಪ್ಪು ಸಂದೇಶವಲ್ಲವೇ.. ಈಕೆಯ ಮೇಲೆ ದೊಂಬಿ, ಗಲಾಟೆ , ಚೀಟಿಂಗ್ ಸೇರಿ 11 ಕೇಸ್ ದಾಖಲಾಗಿದೆ. ಅದಲ್ಲದೆ ಖ್ಯಾತ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ನಾನು ಆರ್ ಎಸ್ ಎಸ್ ಮುಖಂಡೆ ಎಂದು ಹೇಳಿ MLA ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಐದು ಕೋಟಿಗೂ ಹೆಚ್ಚು ಹಣವನ್ನು ಡಿಮಾಂಡ್ ಇಟ್ಟಿದ್ದಾರೆ.ಈಕೆ ಚೈತ್ರ ಕುಂದಾಪುರ ಹೆಸರು ಎಲ್ಲಿಯೂ ಬರಬಾರದು ಎಂದು ಕೋರ್ಟ್ ಗೆ ಹೋಗಿರುತ್ತಾಳೆ. ವಾಹಿನಿಯವರು ಚೈತ್ರ ಕುಂದಾಪುರ ಅವರನ್ನು ಬಳಸಿಕೊಂಡು ಸಮಾಜಕ್ಕೆ ಯಾವ ಸಂದೇಶ ನೀಡಬಹುದು ಎಂದು ಹೇಳುತ್ತಾ ಆದಷ್ಟು ಬೇಗ ಅವರನ್ನು ಬಿಗ್ಬಾಸ್ ಮನೆಯಿಂದ ಹೊರಗೆ ಕಳಿಸುವಂತೆ ನೋಟಿಸ್ ನೀಡಿದ್ದಾರೆ.






