ಆರ್ಥಿಕ
ಗ್ರಾಹಕರಿಗೆ LPG ಬೆಲೆ ಏರಿಕೆ ಶಾಕ್: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 209 ರೂ. ಏರಿಕೆ

Views: 1
ನವದೆಹಲಿ: ಅಕ್ಟೋಬರ್ ಆರಂಭದಲ್ಲೇ ಆಯಿಲ್ ಕಂಪನಿಗಳು ಗ್ರಾಹಕರಿಗೆ ಬೆಲೆ ಏರಿಕೆಯ ಆಘಾತವನ್ನು ನೀಡಿದೆ. ಇಂದಿನಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 209 ರೂಪಾಯಿ ಏರಿಕೆ ಕಂಡಿದೆ
ಬೆಲೆ ಏರಿಕೆಯಿಂದಾಗಿ 19 ಕೆಜಿ ಸಿಲಿಂಡರ್ ರಾಜಧಾನಿ ದೆಹಲಿಯಲ್ಲಿ 1731.50 ರೂ.ಗೆ ಮಾರಾಟವಾಗಲಿದೆ. ಸೆಪ್ಟೆಂಬರ್ನಲ್ಲಿ ಈ ಬೆಲೆ 1522.50 ರೂ. ಇತ್ತು. ಮುಂಬೈನಲ್ಲಿ 1482 ರೂ.ನಿಂದ 1684 ರೂ.ಗೆ ಏರಿಕೆಯಾಗಿದೆ. ಕೊಲ್ಕತದಲ್ಲಿ 1636 ರೂ. ನಿಂದ 1839.50 ಹಾಗೂ ಚೆನ್ನೈನಲ್ಲಿ 1695 ರೂ.ನಿಂದ 1898 ರೂ. ವರೆಗೆ ಏರಿಕೆಯಾಗಿದೆ.
ಆದರೆ, 14.20 ಕೆಜಿಯ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಸರ್ಕಾರ ಗೃಹಬಳಕೆಯ ಎಲ್ಪಿಜಿ ಬೆಲೆಯಲ್ಲಿ 200 ರೂ. ಕಡಿತ ಮಾಡಿದೆ. ಇದರೊಂದಿಗೆ ದೆಹಲಿಯಲ್ಲಿ ಗೃಹ ಬಳಕೆಯ ಎಲ್ಜಿಪಿ 903 ರೂ. ಕೊಲ್ಕತದಲ್ಲಿ 929, ಮುಂಬೈನಲ್ಲಿ 902.50 ಮತ್ತು ಚೆನ್ನೈನಲ್ಲಿ 918.50 ರೂಪಾಯಿ ಇದೆ.






