ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಪೋಷಕರ ಸಭೆ
ಶೈಕ್ಷಣಿಕ ಮಾರ್ಗದರ್ಶನದೊಂದಿಗೆ ಸಮಾಜದಲ್ಲಿನ ಪ್ರತಿಯೊಬ್ಬ ಪೋಷಕರು ಹೊಣೆಗಾರಿಕೆ ಅರಿತು ಮಗುವಿನ ಮನೋವಿಕಾಸಕ್ಕೆ ಕಾರಣರಾಗಬೇಕು----ಅನುಪಮಾ ಎಸ್ ಶೆಟ್ಟಿ, ಕಾರ್ಯನಿರ್ವಾಹಕರು ಬಾಂಡ್ಯಾ ಎಜುಕೇಶನಲ್ ಟ್ರಸ್ಟ್.
Views: 0
ಕನ್ನಡ ಕರಾವಳಿ ಸುದ್ದಿ: ವಕ್ವಾಡಿಯ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಅಂಗ ಸಂಸ್ಥೆಯಾದ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ 2026- 27ನೇ ಸಾಲಿನ ಮೊದಲ ಪೋಷಕ ಶಿಕ್ಷಕ ಸಭೆಯನ್ನು ಜೂನ್ 13 ರಂದು ಆಯೋಜಿಸಲಾಗಿತ್ತು.
ಶೈಕ್ಷಣಿಕ ಪ್ರಗತಿಗೆ ಪೂರಕವಾದ ಈ ಸಭೆಯನ್ನು ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿಯಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ರತಿಯೊಂದು ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಅತ್ಯಂತ ಪ್ರಮುಖವಾದುದು. ಮಗುವಿನ ಸಮಗ್ರ ವಿಕಾಸಕ್ಕೆ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶನದೊಂದಿಗೆ ಸಮಾಜದಲ್ಲಿನ ಪ್ರತಿಯೊಬ್ಬ ಪೋಷಕರು ಹೊಣೆಗಾರಿಕೆ ಅರಿತು ಮಗುವಿನ ಮನೋವಿಕಾಸಕ್ಕೆ ಕಾರಣರಾಗಬೇಕು. ಅಂಕಗಳೇ ಮುಖ್ಯವಾಗಿರದೆ ಮೌಲ್ಯಯುತ ಶಿಕ್ಷಣ ಇಂದು ಅತಿ ಅಗತ್ಯವಾದದ್ದು. ಸದೃಢ ಸಮಾಜಕ್ಕೆ ಪ್ರತಿಯೊಬ್ಬ ಮಗುವಿನ ಕಾಣಿಕೆ ಮಹತ್ತರವಾದದು. ಮಕ್ಕಳ ಮನಸ್ಸಿನಲ್ಲಿ ಅಡಗಿದ ಸುಪ್ತ ಪ್ರತಿಭೆಯನ್ನು ಗುರುತಿಸಿ ಮುನ್ನಡೆಸಬೇಕಾದದು ನಮ್ಮೆಲ್ಲರ ಪ್ರಧಾನ ಗುರಿಯಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲರಾದ ಡಾ. ರೂಪ ಶೆಣೈ ರವರು ಸರ್ವರನ್ನು ಸ್ವಾಗತಿಸಿ, ಈ ಶೈಕ್ಷಣಿಕ ವರ್ಷದ ಚಟುವಟಿಕೆ, ನಿಯಮ,ಬೋಧನಾ ವಿಧಾನ ಮುಂತಾದ ವಿಷಯಗಳ ಕುರಿತು ವಿಸ್ತೃತವಾಗಿ ತಿಳಿಸಿದರು. ಶಿಕ್ಷಕಿ ಶ್ರೀಮತಿ ಪ್ರಿಯಾಂಕಾ ವೆಂಕಟೇಶ್ ಪ್ರಾರ್ಥಿಸಿದರು. ಶಿಕ್ಷಕಿ ಶ್ರೀಮತಿ ಆಶ್ರಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.






