ಶಿಕ್ಷಣ

ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಪುಟಾಣಿಗಳಿಗೆ ಹಾಡು, ನೃತ್ಯ, ಆಟಿಕೆಗಳ ಮೂಲಕ ಬಣ್ಣಗಳ ದಿನಾಚರಣೆ 

Views: 41

ಕುಂದಾಪುರ: ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ಪುಟಾಣಿಗಳಿಗೆ ಶಾಲೆಯ ಪುಷ್ಪವಾಟಿಕಾದಲ್ಲಿ ಬಣ್ಣಗಳ ದಿನವನ್ನು ಅತ್ಯಂತ ಆಕರ್ಷಕವಾಗಿ ಜೂನ್ 28 ರಂದು ಆಚರಿಸಿಸಲಾಯಿತು.

ಬಣ್ಣಗಳ ದಿನಾಚರಣೆಯ ಅಂಗವಾಗಿ ಪುಟಾಣಿಗಳು ಬಣ್ಣಬಣ್ಣದ ಉಡುಗೆಯಲ್ಲಿ ಮುದ್ದಾಗಿ ಕಾಣಿಸುತ್ತಿದ್ದರು. ಜೊತೆಗೆ ವಿವಿಧ ಬಣ್ಣಗಳ ಮಹತ್ವವನ್ನು ಶಿಕ್ಷಕಿಯರು ನಾನಾ ಹಾಡು ಹಾಗೂ ನೃತ್ಯದ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಸಿದರು.

ಬಣ್ಣದ ಪೇಪರ್ ನಲ್ಲಿ ಪುಟಾಣಿಗಳಿಗೆ ಆಕರ್ಷಕ ಆಟಿಕೆಗಳನ್ನು ಮಾಡಿ ಕೊಡಲಾಯಿತು. ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳ ಮೂಲಕ ಬಣ್ಣಗಳ ಮಹತ್ವವನ್ನು ಅರ್ಥಪೂರ್ಣವಾಗಿ ಅರಿತರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯನಿರ್ವಾಹಕಿ ಶ್ರೀಮತಿ ಅನುಪಮಾ.ಎಸ್.ಶೆಟ್ಟಿ, ಪ್ರಾಂಶುಪಾಲರಾದ ಶ್ರೀ. ಸುನಿಲ್, ಪ್ಯಾಟ್ರಿಕ್ ಸಂಯೋಜಕಿ ವಿಶಾಲ ಶೆಟ್ಟಿ, ಶಿಕ್ಷಕಿಯರು ಉಪಸ್ಥಿತರಿದ್ದರು.

Related Articles

Back to top button