ಸಾಂಸ್ಕೃತಿಕ

ಗಂಡನಿಗೆ ವಾಟ್ಸಾಪ್ ಕಾಲ್ ಮಾಡಿ ಬಾತ್ ರೂಂನಲ್ಲಿ ಬೆಂಕಿ ಹಚ್ಚಿಕೊಂಡ ಪ್ರಕರಣ: ಚಿತಾಗಾರದಲ್ಲಿ ಗಲಾಟೆ 

Views: 109

ಬೆಂಗಳೂರು: ನಗುನಗುತ್ತಲೇ ಗಂಡನ ಕೈ ಹಿಡಿದು ಬಂದಿದ್ದ ಇದೇ ಅನುಷಾ ಇದೇ ಗಂಡನಿಂದಲೇ ಚಿತ್ರಹಿಂಸೆ ಪಟ್ಟು ಶವವಾಗಿದ್ದಾಳೆ ಅನ್ನೋ ಆರೋಪ ಕೇಳಿ ಬಂದಿದೆ.

ಮದುವೆಯಾದ ಆರಂಭದಲ್ಲಿ ಚೆನ್ನಾಗಿಯೇ ಇದ್ದ ಶ್ರೀಹರಿ ಬರ್ತಾ ಬರ್ತಾ ವರಸೆ ಬದಲಿಸಿದ್ದ. ಕಳೆದ ಮೂರು ತಿಂಗಳಿನಿಂದ ಆಕೆಗೆ ಡಿವೋರ್ಸ್ ಕೊಡುವಂತೆ ಟಾರ್ಚರ್ ಕೊಟ್ಟಿದ್ನಂತೆ. ಪದೇ ಪದೇ ನನಗೆ ಬೇರೆ ಸಂಬಂಧ ಇದೆ. ನನ್ನ ಬಿಟ್ಬಿಡು ಅಂತಾ ಪೀಡಿಸ್ತಿದ್ನಂತೆ. ಮಗುವಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದ ಅನುಷಾಳ ತಾಳ್ಮೆಯ ಕಟ್ಟೆ ಒಡೆದಿತ್ತು. ಹೀಗಾಗಿ, ಗಂಡನಿಗೆ ವಾಟ್ಸಾಪ್ ಕಾಲ್ ಮಾಡಿ ಬಾತ್ ರೂಂನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು.

ಅನುಷಾಳ ಪೋಷಕರು ಮನೆಗೆ ಬಂದು ನೋಡುವಷ್ಟ್ರಲ್ಲಿ ಅನುಷಾ ಅರ್ಧ ಬೆಂದು ಹೋಗಿದ್ದಳು. ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಮಗಳ ಸಾವಿಗೆ ಅಳಿಯನೇ ಕಾರಣ. ಅನುಷಾ ತಂದೆ ಹೇಮಂತ್ ಅವರು ಶ್ರೀಹರಿ ನಟ ದರ್ಶನ್ ಎರಡನೇ ಮದುವೆ ಆಗಿದ್ದಾನೆ. ಅವರು ಸಂತೋಷವಾಗಿಲ್ವಾ. ನಾನು ಎರಡನೇ ಮದುವೆ ಆದ್ರೆ ತಪ್ಪೇನು ಎಂದು ಕೇಳುತ್ತಿದ್ದನಂತೆ ಎಂದು ಹೇಳಿದ್ದಾರೆ. ಅನುಷಾ ಬೆಂಕಿ ಹಚ್ಚಿಕೊಳ್ಳೋದು ನೋಡಿದ್ರೂ ಶ್ರೀಹರಿ ಸುಮ್ಮನಾಗಿದ್ದ. ಅನುಷಾಳ ಕಾಪಾಡಬಹುದಿತ್ತು ಆದ್ರೂ ಕಾಪಾಡಿಲ್ಲ. ಸಾಯಲಿ ಅಂತಾನೇ ಸುಮ್ಮನೆ ಇದ್ದಾನೆ. ಮದುವೆ ಆದಾಗಿನಿಂದಲೂ ಚಿತ್ರಹಿಂಸೆ ನೀಡ್ತಾನೆ ಇದ್ದ ಎಂದು ಪೋಷಕರು ಆರೋಪಿಸಿದ್ದಾರೆ.

ಅನುಷಾ ಮೃತದೇಹವನ್ನ ಅಂತ್ಯಕ್ರಿಯೆಗಾಗಿ ಬನಶಂಕರಿ ವಿದ್ಯುತ್ ಚಿತಾಗಾರಕ್ಕೆ ಒಯ್ದಾಗ ಶ್ರೀಹರಿ ಹಾಗೂ ಅನುಷಾ ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಸುಳ್ಳು ಆರೋಪ ಮಾಡ್ತಿದ್ದೀರಾ ಅಂತ ಶ್ರೀಹರಿ ಮನೆಯವ್ರು ವಾಗ್ವಾದಕ್ಕಿಳಿದಿದ್ರಿಂದ ಹೈಡ್ರಾಮಾ ಸೃಷ್ಟಿಯಾಗಿತ್ತು.

Related Articles

Back to top button
error: Content is protected !!