ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ, ನುಡಿನಮನ

Views: 54
ಉಡುಪಿ : ಡಾ.ಕೋಟ ಶಿವರಾಮ ಕಾರಂತ ಸಂಶೋಧನ ಮತ್ತು ಅಧ್ಯಯನ ಟ್ರಸ್ಟ್ ಮಾನಸ ಸಾಲಿಗ್ರಾಮ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಲಾಯಿತು.
“ಕಾರಂತರ ಬದುಕೆ ವಿಸ್ಮಯ ಅವರ ನೇರ ನಡೆ ನುಡಿ ಬದುಕಿನ ತಳಹದಿಗೆ ಭದ್ರಬುನಾದಿ ನೀಡಿದೆ” ಎಂದು ಸಾಹಿತಿ ನರೇಂದ್ರ ಕುಮಾರ್ ಕೋಟ ಹೇಳಿದರು.
ಅಧ್ಯಯನ ಕೇಂದ್ರದ ವಿಶ್ವಸ್ಥ ಮಂಡಳಿಯ ಪ್ರಮುಖರಾದ ಗುಜ್ಜಾಡಿ ಪ್ರಭಾಕರ್ ನಾಯಕ್ ಪ್ರಾಸ್ತಾವನೆ ಸಲ್ಲಿಸಿ “ಕಾರಂತ ಕಲಾ ಸಾಹಿತ್ತಿಕ ಬದುಕಿನ ಕೇಂದ್ರದ ಬಗ್ಗೆ ಮತ್ತಷ್ಟು ಅಭಿವೃದ್ಧಿಗೆ ವೇದಿಕೆ ಕಲ್ಪಿಸುವಂತಾಗಬೇಕು” ಎಂದರು.

ಆಭರಣ ಜ್ಯುವೆಲ್ಲರ್ಸ್ ಉಡುಪಿ ಇದರ ಆಡಳಿತ ನಿರ್ವಾಹಕ ನಿರ್ದೇಶಕರಾದ ಸುಭಾಸ್ ಎಂ. ಕಾಮತ್ , ಮಹೇಶ್ ಎಂ. ಕಾಮತ್ ,ಸಂಧ್ಯಾ ಎಸ್ ಕಾಮತ್,ಬ್ರಹ್ಮಾವರ ಕಸಾಪ ಅಧ್ಯಕ್ಷ ಜಿ.ರಾಮಚಂದ್ರ ಐತಾಳ್,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್,ವಿಶ್ವಸ್ಥ ಮಂಡಳಿಯ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು. ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಗುರುರಾಜ್ ಕೋಟೇಶ್ವರ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ನಾರಾಯಣ ಆಚಾರ್ ವಂದಿಸಿದರು.






