ಶಿಕ್ಷಣ

ಕೋಟ ವಿವೇಕ ಪದವಿಪೂರ್ವ ಕಾಲೇಜು: ಸಾಹಿತ್ಯ ಸಂಘ ಉದ್ಘಾಟನಾ ಕಾರ್ಯಕ್ರಮ

"ವಿದ್ಯಾರ್ಥಿಗಳು ಮೊದಲಿಗೆ ಸಣ್ಣ ಸಣ್ಣ ಹನಿಗವನಗಳನ್ನು ಹಾಗೂ ಕಥೆಗಳನ್ನು ಓದುವುದು ಅಭ್ಯಾಸ ಮಾಡಿಕೊಳ್ಳಬೇಕು. ಹೀಗೆ ಹಂತ ಹಂತವಾಗಿ ಓದಿನೊಂದಿಗೆ ಬರಹವನ್ನು ರೂಡಿ ಮಾಡಿಕೊಂಡಲ್ಲಿ ಮುಂದೊಂದು ದಿನ ಉತ್ತಮ ಸಾಹಿತಿಯಾಗಲು ಸಾಧ್ಯ"

Views: 20

ಉಡುಪಿ:ಕೋಟ ವಿವೇಕ ಪದವಿಪೂರ್ವ ಕಾಲೇಜಿನ 2024- 25ನೇಶೈಕ್ಷಣಿಕ ವರ್ಷದ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ನರೇಂದ್ರ ಕುಮಾರ್ ಕೋಟ ,ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಇವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಮೊದಲಿಗೆ ಸಣ್ಣ ಸಣ್ಣ ಹನಿಗವನಗಳನ್ನು ಹಾಗೂ ಕಥೆಗಳನ್ನು ಓದುವುದು ಅಭ್ಯಾಸ ಮಾಡಿಕೊಳ್ಳಬೇಕು. ಹೀಗೆ ಹಂತ ಹಂತವಾಗಿ ಓದಿನೊಂದಿಗೆ ಬರಹವನ್ನು ರೂಡಿ ಮಾಡಿಕೊಂಡಲ್ಲಿ ಮುಂದೊಂದು ದಿನ ಉತ್ತಮ ಸಾಹಿತಿಯಾಗಲು ಸಾಧ್ಯ ಎಂದು ತಿಳಿಸಿದರು,ಈ ವಿಷಯದಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಕಣ್ಣನ್ನು ಸದಾ ತೆರೆದಿಟ್ಟುಕೊಳ್ಳಬೇಕೆಂದು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶನಾವಡರು ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು.ವಿದ್ಯಾರ್ಥಿನಿ ಕುಮಾರಿ ಉನ್ನತಿ ಕಾರ್ಯಕ್ರಮ ನಿರೂಪಿಸಿದರು.ಸಾಹಿತ್ಯ ಸಂಘದ ಸಂಚಾಲಕ ಶ್ರೀ ಚಂದ್ರಶೇಖರ ವಂದಿಸಿದರು.

Related Articles

Back to top button