ಶಿಕ್ಷಣ

ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಸತ್-ಉದ್ಘಾಟನಾ ಸಮಾರಂಭ

Views: 57

ಕೋಟ:ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು.

ಉದ್ಘಾಟಕರಾಗಿ ಕೋಟತಟ್ಟು ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶ್ರೀ ಸತೀಶ್ ಕುಂದರ್ ಇವರು ಆಗಮಿಸಿ, ವಿದ್ಯಾರ್ಥಿ ಸಂಸತ್ತನ್ನು ದೀಪ ಬೆಳಗಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ‘ಶಾಲಾ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣದೊಂದಿಗೆ ಪಠ್ಯ-ಪಾಠೇತರ ಚಟುವಟಿಕೆಗಳು ಸಸೂತ್ರವಾಗಿ ನಡೆಯಲು ವಿದ್ಯಾರ್ಥಿ ಸರಕಾರದ ರಚನೆ ಅತಿ ಅಗತ್ಯ. ಹೇಗೆ ಸಂಸತ್‌ನಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ದೇಶವನ್ನು ಮುನ್ನೆಡುಸುವಲ್ಲಿ ಸಹಕಾರಿಯೋ ಹಾಗೇ ವಿದ್ಯಾರ್ಥಿ ಸಂಸತ್‌ನ ನಿರ್ಣಯಗಳು ಶಾಲಾ ಸರಕಾರವನ್ನು ನಡೆಸುವಲ್ಲಿ ತುಂಬಾ ಸಹಕಾರಿ, ಆದ್ದರಿಂದ ವಿದ್ಯಾರ್ಥಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವ ವಿಧಾನವನ್ನು ಅರಿತುಕೊಳ್ಳಬೇಕು. ಇದರಿಂದ ಜೀವನದಲ್ಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಶಾಲಾ ರಾಜ್ಯದ ಅಧ್ಯಕ್ಷರು ಪ್ರಾಂಶುಪಾಲ ಶ್ರೀ ಕೆ.ಜಗದೀಶ ನಾವಡರು ವಿದ್ಯಾರ್ಥಿಸರಕಾರ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿ ವಿದ್ಯಾರ್ಥಿಗಳು ತಮ್ಮ ಓದಿನೊಂದಿಗೆ ತಮ್ಮ ಕರ್ತವ್ಯ ಪ್ರಜ್ಞೆಯನ್ನು ರೂಢಿಸಿಕೊಂಡು ಸ್ವಚ್ಛತೆಗೆ ಹೆಚ್ಚು ಆದ್ಯತೆಯನ್ನು ನೀಡಬೇಕೆಂದು ಕರೆಯಿತ್ತರು. ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕರಾದ ಶ್ರೀ ವೆಂಕಟೇಶ ಉಡುಪರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವಿದ್ಯಾರ್ಥಿ ಸಂಸತ್‌ನ ವಾಕ್ಪತಿಯಾಗಿ ಕುಮಾರಿ ಅದಿತಿ ದೇವಿ ಭಟ್ ಪ್ರಮಾಣ ವಚನ ಸ್ವೀಕರಿಸಿದರು. ಉಪವಾಕ್ಪತಿಯಾಗಿ ಪ್ರೌಢಶಾಲಾ ವಿಭಾಗದ ಸೈಯ್ಯದ್ ಹುಸೇನ್ ಅಕ್ತರ್ ಪ್ರಮಾಣ ವಚನ ಸ್ವೀಕರಿಸಿದರು. ಸರಕಾರದ ಮುಖ್ಯಮಂತ್ರಿಯಾಗಿ ಕೇಶವ ಉಪಾಧ್ಯ ಅತಿಥಿಗಳನ್ನು ಸ್ವಾಗತಿಸಿದರು. ಉಪಮುಖ್ಯಮಂತ್ರಿ ನಿತಿನ್ ಕಿಣಿ ಧನ್ಯವಾದವನ್ನಿತ್ತರು. ವಿದ್ಯಾರ್ಥಿ ಸರಕಾರದ ಸಂಯೋಜಕರಾದ ಶ್ರೀ ಗಣೇಶ್ ಕುಮರ್ ಶೆಟ್ಟಿ ಮತ್ತು ಶಿಕ್ಷಕಿ ಶ್ರೀಮತಿ ರತಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾಸಂಸ್ಥೆಗಳ ಎಲ್ಲಾ ಸಿಬಂದಿವರ್ಗದವರು ಹಾಜರಿದ್ದರು. ಕುಮಾರಿ ಉನ್ನತಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button