ಶಿಕ್ಷಣ

ಕೋಟ- ಪಡುಕೆರೆ ಕಾಲೇಜು: ರಾಷ್ಟ್ರೀಯ ಸೇವಾ ಯೋಜನೆ ವಾಷಿ೯ಕ ಶಿಬಿರ ಸಮಾರೋಪ

Views: 5

ಕುಂದಾಪುರ : ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಿಂದ ತನ್ನ ಸೇವೆಯ ಜೊತೆಗೆ ಎಲ್ಲರ ಏಳಿಗೆಯೇ ನಿಜವಾದ ಸಮಾಜ ಸೇವೆ ಎಂದು ಕುಂದಾಪುರ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅವರು ಭಾನುವಾರ ವಕ್ವಾಡಿ ಸ. ಹಿ. ಪ್ರಾ. ಶಾಲೆ ಯಲ್ಲಿ ನಡೆದ ಕೋಟ- ಪಡುಕೆರೆ ಶ್ರೀ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವಾಷಿ೯ಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲೆ ಡಾ. ಸುನೀತ. ವಿ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಮುಖ್ಯ ಶಿಕ್ಷಕ ವಕ್ವಾಡಿ ವೇಣುಗೋಪಾಲ ಹೆಗ್ಡೆ ಸಮಾರೋಪ ಭಾಷಣ ಮಾಡಿ, ಪ್ರಗತಿ ನನ್ನಿಂದ ಸಾಧ್ಯವಿಲ್ಲ ಎಲ್ಲರಿಂದ ಸಾಧ್ಯ, ಸುತ್ತ ಮುತ್ತಲಿನ ಸಮಾಜದ ಕುಂದು ಕೊರತೆಗಳನ್ನು ಅರಿಯಲು, ಉತ್ತಮ ಜೀವನ ವ್ಯಕ್ತಿತ್ವ ಬೆಳೆಸಿ ಕೊಂಡು ಯವ ನಾಯಕರನ್ನು ಬೆಳೆಸುತ್ತದೆ ಎಂದರು.

ದುಬೈ ಉದ್ಯಮಿ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ಮಾತನಾಡಿ, ಬದುಕುವ ರೀತಿ ಮತ್ತು ಬದುಕುವ ಕಲೆಯನ್ನು ಕಲಿಸಿ ಕೊಡುವುದರ ಜತೆಗೆ, ಆಹಾರವಿಲ್ಲದೆ ಬದುಕಬಹುದು, ಆದರೆ, ನೀರು ಮತ್ತು ಗಾಳಿ ಇಲ್ಲದೆ ಬದುಕಲು ಅಸಾಧ್ಯ ಆ ನಿಟ್ಟಿನಲ್ಲಿ ನೀರಿನ ಅಭಾವ ಸರಿದೂಗಿಸಲು ಮಳೆಗಾಲದಲ್ಲಿ ನೀರನ್ನು ಶೇಖರಣೆ ಮಾಡಿಕೊಂಡು ಸದ್ ವಿನಿಯೋಗ ಆಗಬೇಕಾಗಿದೆ ಎಂದರು.

ಸಭೆಯಲ್ಲಿ ಗೀತಾನಂದ ಪೌಂಡೇಶನ್ ಪ್ರವತ೯ಕರಾದ ಆನಂದ್. ಸಿ. ಕುಂದರ್, ಕಾಳಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮಚಂದ್ರ ನಾವಡ, ಕೋಟ – ಪಡುಕೆರೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಕಾಯ೯ದಶಿ೯ ಪ್ರಸಾದ ಬಿಲ್ಲವ, ವಕ್ವಾಡಿ ಸ. ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.

ಶಿಬಿರಾಥಿ೯ಗಳಾದ ಕೀತ೯ನಾ, ಸ್ನೇಹ, ಪೂಣಿ೯ಮಾ, ಸುದೀಪ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಇದೇ ಸಂದಭ೯ದಲ್ಲಿ ಉಪನ್ಯಾಸಕ ರಂಜಿತ್ ಕುಮಾರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಪೂಣಿ೯ಮಾ ಪ್ರಾಥಿ೯ಸಿದರು. ಶಿಬಿರಾಧಿಕಾರಿ ಡಾ. ಮನೋಜ್ ಕುಮಾರ ಸ್ವಾಗತಿಸಿದರು. ರಚನಾ ನಿರೂಪಿಸಿದರು. ಶಿಬಿರಾಧಿಕಾರಿ ರಾಜಣ್ಣ ವಂದಿಸಿದರು. ಇದೇ ಸಂದಭ೯ದಲ್ಲಿ ಉಪನ್ಯಾಸಕ ರಂಜಿತ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

Related Articles

Back to top button